ಸೀರೆಯಲ್ಲೇ ಫುಟ್‌ಬಾಲ್‌ ಆಡಿದ ಸಂಸದೆ ಮಹುವಾ; ಫೋಟೋ ವೈರಲ್‌

ಕೋಲ್ಕತ್ತ; ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೀರೆಯುಟ್ಟೇ ಫುಟ್‌ಬಾಲ್ ಆಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಂಪಿ ಕಪ್ ಟೂರ್ನಮೆಂಟ್ 2022’ ರಲ್ಲಿ ಭಾಗವಹಿಸಿದ್ದ ಅವರು, ಫುಟ್‌ಬಾಲ್‌ ಆಡಿದ್ದು, ಅದರ ಫೋಟೋಗಳನ್ನು ಅವರೇ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಮಹುವಾ ಅವರು ಸ್ಫೋರ್ಟ್ಸ್‌ ಶೂಗಳನ್ನು ಹಾಕಿಕೊಂಡು, ತಮ್ಮ ಎಂದಿನ ಕರಿ ಕನ್ನಡಕ ಧರಿಸಿ ಫುಟ್‌ ಬಾಲ್‌ ಅನ್ನು ಕಿಕ್‌ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಗಳನ್ನು ಮಹುವಾ ಅವರು ತಮ್ಮ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ‘ಕೃಷ್ಣನಗರ ‘ಎಂಪಿ ಕಪ್ ಟೂರ್ನಮೆಂಟ್ 2022’ರ ಫೈನಲ್‌ನ ಮೋಜಿನ ಕ್ಷಣಗಳಿವು. ಹೌದು, ನಾನು ಸೀರೆಯಲ್ಲೇ ಆಡುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

Share Post

Leave a Reply

Your email address will not be published.