ಟೆನಿಸ್‌ ಜಗತ್ತಿಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್‌

ನ್ಯೂಯಾರ್ಕ್; ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಟೆನಿಸ್‌ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೋಲಿನ ನಂತರ ಅವರು ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದರು. ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, 46ನೇ ರ್ಯಾಂಕ್‌ನ ಆಸ್ಟ್ರೇಲಿಯಾದ ಅಜ್ಲಾ ಟಾಮ್ಲಜಾನೊವಿಚ್ ವಿರುದ್ಧ 7-5, 6-7(4), 6-1ರ ಅಂತರದಲ್ಲಿ ಪರಾಭವಗೊಂಡರು. ಮೊದಲ ಸೆಟ್‌ ಕಳೆದುಕೊಂಡ ಸೆರೆನಾ ದ್ವಿತೀಯ ಸೆಟ್‌ ಟೈ-ಬ್ರೇಕರ್‌ನಲ್ಲಿ ಗೆದ್ದು ಭರ್ಜರಿ ಪುನರಾಗಮನ ಮಾಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ಸೋಲು ಕಂಡರು.

40 ವರ್ಷದ ಸೆರೆನಾ ಈವರೆಗೆ ಒಟ್ಟು 23 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಈ ಮೂಲಕ ಆಧುನಿಕ ಟೆನಿಸ್ ಲೋಕದ ರಾಣಿ ಎನಿಸಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೇಟ್ ಕೋರ್ಟ್ (24) ಬಳಿಕ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಆಟಗಾರ್ತಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಟೆನಿಸ್ ವೃತ್ತಿ ಜೀವನದಲ್ಲಿ ವಿವಾದ ಸೇರಿದಂತೆ ಹಲವು ಏಳು-ಬೀಳುಗಳನ್ನು ಕಂಡಿರುವ ಸೆರೆನಾ, ತಲಾ ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್, ಆರು ಬಾರಿ ಅಮೆರಿಕನ್ ಓಪನ್ ಮತ್ತು ಮೂರು ಸಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

Share Post

Leave a Reply

Your email address will not be published.