ಪಂಜಾಬ್‌ ಕಿಂಗ್ಸ್‌ ಮುಖ್ಯ ಕೋಚ್‌ ಸ್ಥಾನದಿಂದ ಅನಿಲ್‌ ಕುಂಬ್ಳೆ ಔಟ್‌..?

ನವದೆಹಲಿ: ಐಪಿಎಲ್‌ನ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ. ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಗುತ್ತಿಗೆ ಅವಧಿ ಶೀಘ್ರದಲ್ಲೇ ಮುಗಿಯಲಿದೆ. ಆದ್ರೆ ಮುಂದಿನ ಅವಧಿಗೆ ಅವರನ್ನು ಮುಂದುವರಿಸಲು ಪಂಜಾನ್ ಕಿಂಗ್ಸ್ ತಂಡ ಒಲವು ಹೊಂದಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದ್ದು, ಪಂಜಾಬ್ ಕಿಂಗ್ಸ್ ತಂಡದ ಮಾಲೀಕರ ಮಂಡಳಿ, ಕುಂಬ್ಳೆ ಅವರನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ಹೇಳಿದೆ. ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಅನಿಲ್ ಕುಂಬ್ಳೆ ಅವರು 2020ರ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಕುಂಬ್ಳೆ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ 42 ಪಂದ್ಯ ಆಡಿದ್ದು, ಅದರಲ್ಲಿ 18 ಗೆಲುವು ಮತ್ತು 22 ಸೋಲು ದಾಖಲಿಸಿದ್ದು, ಎರಡು ಪಂದ್ಯ ಟೈ ಆಗಿದೆ.

Share Post

Leave a Reply

Your email address will not be published.