ಮೋದಿ ನೋಡಿ ಉತ್ತರಾಖಂಡ್‌ ಜನ ಮತ; ಪ್ರಲ್ಹಾದ್‌ ಜೋಷಿ

ಉತ್ತರಾಖಂಡ್‌ನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಉತ್ತರಾಖಂಡ್‌ನಲ್ಲಿ ನಾವು ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದರೂ, ಅಲ್ಲಿನ ಜನ ಮೋದಿ ಮುಖ ನೋಡಿ ಮತ ಹಾಕಿದ್ದಾರೆ. ಇದಕ್ಕೆ ನಮ್ಮ ಪಕ್ಷ ಸಂಘಟನೆಯೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯವೊಂದಕ್ಕೆ ಹೇಳಿಕೆ ನೀಡಿರುವ ಅವರು, ನಾವು ಉತ್ತರಾಖಂಡ್‌ನಲ್ಲಿ 11000 ಸಣ್ಣ ಸಣ್ಣ ಮೀಟಿಂಗ್‌ಗಳನ್ನು ಮಾಡಲು ತೀರ್ಮಾನಿಸಿದ್ದೆವು. ಆದ್ರೆ, ಕೆಲ ಕಾರಣಗಳಿಂದ ಸುಮಾರು 80 ಸಾವಿರ ಮೀಟಿಂಗ್‌ಗಳನ್ನು ಮಾಡುವಲ್ಲಿ ಸಫಲವಾದೆವು. ಈ ಸಣ್ಣ ಸಣ್ಣ ಮೀಟಿಂಗ್‌ಗಳಲ್ಲಿ ಬಿಜೆಪಿ ಯಾಕೆ ಬೇಕು..? ಮೋದಿಯ ಅನಿವಾರ್ಯತೆ ಏಕೆ ಇದೆ..? ಎಂಬುದನ್ನು ಮನದಟ್ಟು ಮಾಡಿಕೊಟ್ಟೆವು. ಇದು ಚುನಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ಉತ್ತರಾಖಂಡ್‌
70 ಸ್ಥಾನ/ ಮ್ಯಾಜಿಕ್‌ ನಂಬರ್‌ 36

ಬಿಜೆಪಿ – 47
ಕಾಂಗ್ರೆಸ್‌ – 20
ಇತರೆ – 03

Share Post