ರವಿಶಂಕರ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಚೆನ್ನೈ; ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ. ತಮಿಳುನಾಡಿನ ಈರೋಡ್‌ ಬಳಿ ಹೆಲಿಕಾಪ್ಟರ್‌ ಭೂಸ್ಪರ್ಶ ಮಾಡಿದ್ದು, ಶ್ರೀಗಳು ಸೇಫಾಗಿದ್ದಾರೆ.

ರವಿಶಂಕರ ಗುರೂಜಿಯವರು ತಿರುಪುರದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಉಕಿನಿಯಂ ಗ್ರಾಮದ ಬಳಿ ಹೆಲಿಕಾಪ್ಟರ್‌ ಬಂದಾಗ ಹವಾಮಾನ ವೈಪರಿತ್ಯ ಉಂಟಾಗಿದೆ. ಇದ್ರಿಂದಾಗಿ ಹೆಲಿಕಾಪ್ಟರ್‌ ಮುಂದಕ್ಕೆ ಪ್ರಯಾಣಿಸಲು ಆಗದೇ ಪೈಲಟ್‌ ತುರ್ತು ಭುಸ್ಪರ್ಶ ಮಾಡಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಗುರೂಜಿ ಜೊತೆ ಇಬ್ಬರು ಆಪ್ತ ಸಹಾಯಕರು ಮತ್ತು ಒಬ್ಬ ಪೈಲಟ್ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

Share Post

Leave a Reply

Your email address will not be published.