ಪಂಚಭೂತಗಳಲ್ಲಿ ಜನರಲ್‌ ಬಿಪಿನ್ ರಾವತ್‌ ಲೀನ

ದೆಹಲಿ: ತಮಿಳುನಾಡಿನ ಕೂನೂರು ಹೆಲಿಕಾಪ್ಟರ್‌ನಲ್ಲಿ ವಿಧಿವಶರಾಗಿದ್ದ ಬಿಪಿನ್‌ ರಾವತ್‌ ದಂಪತಿ ಪಂಚಭೂತಗಳಲ್ಲಿ ಲೀನರಾದ್ರು. ಕಾಮರಾಜ್‌ ನಿವಾಸದಿಂದ ಚಿತಾಗಾರದವರೆಗೆ ಸೇನಾ ವಾಹನದಲ್ಲಿ ಅಂತಿಮ ಯಾತ್ರೆ ತಲುಪಿತು. ಅಂತಿಮ ವಿಧಿವಿಧಾನ ಮುಗಿದ ಬಳಿಕ ದೆಹಲಿಯ ಬ್ರಾರ್‌ ಸ್ವ್ಕೇರ್‌ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ರಾವತ್‌ ದಂಪತಿ ಪುತ್ರಿಯರಾದ ತಾರಿಣಿ, ಕೃತಿಕಾ ತಂದೆ-ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ರು. ಅಂತ್ಯಕ್ರಿಯೆಯಲ್ಲಿ ರಾವತ್‌ ಕುಟುಂಬಸ್ಥರು, ರಾಜಕೀಯ ಗಣ್ಯರು, ಸೇನಾಧಿಕಾರಿಗಳು ಭಾಗಿಯಾಗಿದ್ರು. ದೇಶ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧ ರಾವತ್‌ ಇನ್ನು ನೆನಪು ಮಾತ್ರ.

Share Post