ಸ್ಪಾ, ಸಲೂನ್‌ ಹೆಸರಲ್ಲಿ ಹೈಟೆಕ್‌ ವೇಶ್ಯಾವಟಿಕೆ; ದಂಪತಿ ಅರೆಸ್ಟ್‌

ಶಿವಮೊಗ್ಗ; ಸಲೂನ್‌ ಹಾಗೂ ಸ್ಪಾ ಹೆಸರಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಗೆ ನೂಕಲ್ಪಟ್ಟಿದ್ದ ಆರು ಮಂದಿ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ರಾಯಲ್‌ ಆರ್ಚ್‌ ಫ್ಯಾಮಿಲಿ ಸಲೂನ್‌ ಅಂಡ್‌ ಸ್ಪಾ ಇದೆ. ಇದರಲ್ಲಿ ಹೈಟೆಕ್‌ ವೇಶ್ಯಾವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಗೋಪಾಲ ಹಾಗೂ ಆತನ ಪತ್ನಿ ವಿದ್ಯಾಶ್ರೀಯನ್ನು ಪೊಲೀಸರು ಬಂಧಿಸಿದ್ದಾರೆ. ಆರು ಯುವತಿಯರನ್ನು ರಕ್ಷಣೆ ಮಾಡಿ, ಸುರಭಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ.

ಆರೋಪಿಗಳು ಎರಡು ವರ್ಷಗಳಿಂದ ಇಲ್ಲಿ ಸ್ಪಾ ನಡೆಸುತ್ತಿದ್ದರು. ಆದ್ರೆ ಇಲ್ಲಿ ಅಬಲೆಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಇದೇ ವೇಳೆ ಮಸಾಜ್‌ಗೆಂದು ಹೋಗಿದ್ದ ಹೊಳಲ್ಕೆರೆಯ ಜಗದೀಶ್‌ ಹಾಗೂ ತಿಮ್ಮೇಶ್‌ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share Post