ಕೊನೆಗೂ ಫೈನಲ್‌ ಆಯ್ತು ಸಚಿವರ ಪಟ್ಟಿ; ಸಂಜೆಯೊಳಗೆ ಕಾಲ್‌ ಬರುತ್ತೆ..!

ನವದೆಹಲಿ; ಕೊನೆಗೂ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಗಿದಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಒಮ್ಮತಕ್ಕೆ ಬಂದಿದ್ದು, ಇಟ್ಟಿ ರೆಡಿಯಾಗಿದೆ. ನಾಳೆ ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡೋದು ಪಕ್ಕಾ ಆಗಿದೆ.

ರಾಜ್ಯದಲ್ಲಿ ಸರ್ಕಾರದಲ್ಲಿ 34 ಮಂದಿ ಸಂಪುಟ ಸೇರಲು ಅವಕಾಶವಿದೆ. ಇದರಲ್ಲಿ ಈಗಾಗಲೇ 10 ಮಂದಿ ಸಂಪುಟ ಸೇರಿದ್ದಾರೆ. ಇನ್ನು 24 ಸ್ಥಾನಗಳನ್ನು ನಾಳೆಯೇ ತುಂಬಲಾಗುತ್ತದೆ. ಈಗಾಗಲೇ ಪಟ್ಟಿ ಸಿದ್ಧವಾಗಿದೆ. ಇಂದು ಮತ್ತೊಂದು ಸಭೆ ನಡೆಯಲಿದ್ದು, ಖಾತೆ ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಅನಂತರ ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ಸೋನಿಯಾಗಾಂಧಿ ಅವರು ಒಪ್ಪಿಗೆ ಸೂಚಿಸಿದ ನಂತರ ಸಂಪುಟಕ್ಕೆ ಆಯ್ಕೆಯಾದವರಿಗೆ ಕರೆ ಹೋಗಲಿದೆ.

ಮಾಹಿತಿ ಪ್ರಕಾರ ಈ ಕೆಳಕಂಡವರ ಹೆಸರು ಫೈನಲ್‌ ಆಗಿದೆ ಎಂದು ಹೇಳಲಾಗುತ್ತಿದೆ.
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳ್ಕರ್‌
ಶಿವಾನಂದ ಪಾಟೀಲ್ ದರ್ಶನಾಪುರ
ಬಸವರಾಜ ರಾಯರೆಡ್ಡಿ
ಡಾ. ಎಚ್‌.ಸಿ.ಮಹಾದೇವಪ್ಪ
ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಅಜಯ್ ಸಿಂಗ್
ಪುಟ್ಟರಂಗ ಶೆಟ್ಟಿ
ನರೇಂದ್ರ ಸ್ವಾಮಿ
ಹಿರಿಯೂರು ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಸಂತೋಷ ಲಾಡ್
ಎಂ ಕೃಷ್ಣಪ್ಪ
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ್ ತಂಗಡಗಿ
ಮಧುಗಿರಿ ರಾಜಣ್ಣ
ನಾಗೇಂದ್ರ.

Share Post