ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗ-‌ ಶಾಸಕಾಂಗ ಸಭೆ ರದ್ದು ಮಾಡಿದ ಕೈ ನಾಯಕರು

ಪಂಜಾಬ್:‌ 117 ಸ್ಥಾನಗಳಿಗೆ ಪಂಜಾಬ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ಈ ನಡುವೆ ಪಂಜಾಬ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ. ಮ್ಯಾಜಿಕ್‌ ನಂಬರ್‌ 57ರಲ್ಲಿ ಕೇವಲ 18 ಸ್ಥಾನ ಪಡೆದು ಕಾಂಗ್ರೆಸ್‌ ಹಿನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಗೆಲುವಿನ ಭರವಸೆಯಲ್ಲಿದ್ದ ಕಾಂಗ್ರೆಸ್‌ಗೆ ಮತದಾರ ಪ್ರಭು ತಣ್ಣೀರೆರಚಿದ್ದಾನೆ. ಗೆಲುವು ಸಾಧಿಸುವ ನಿಟ್ಟಿನಲ್ಲಿ ತಮ್ಮ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳುವ ಯೋಚನೆ ಮಾಡಿದ ಕಾಂಗ್ರೆಸ್‌ ಇಂದು ಸಂಜೆ 5 ಗಂಟೆಗೆ ಶಾಸಕಾಂಗ ಸಭೆ ಕರೆದಿತ್ತು.

ಇದೀಗ ಹೀನಾಯ ಹಿನ್ನೆಡೆ ಅನುಭವಿಸಿದ ಕಾರಣ ಸಿಎಲ್‌ಪಿ ಸಭೆಯಿಂದ ಕಾಂಗ್ರೆಸ್‌ ರದ್ದು ಮಾಡಿದೆ. ಸಭೆಗೆ ಎಲ್ಲಾ ಹೊಸ ಚುನಾಯಿತ ಶಾಸಕರು ಹಾಜರಾಗಬೇಕು,” ಎಂದು ತಿಳಿಸಿದ್ದ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಈಗ ಸಭೆಯನ್ನೇ ರದ್ದು ಮಾಡಿದ್ದಾರೆ.

Punjab-117/59

cong-18

AAp-90

BJP- 2

SAD-6

OTH-1

 

Share Post