ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಬಿಗ್‌ ಪ್ಲ್ಯಾನ್‌; ರಾಹುಲ್‌ 21 ದಿನ ಪಾದಯಾತ್ರೆ

ಬೆಂಗಳೂರು; ರಾಜ್ಯದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ವಿಶೇಷ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ಎಐಸಿಸಿ ಆಯೋಜಿಸಿರುವ ಈ ಯಾತ್ರೆ ಸೆ.7 ರಿಂದ ಆರಂಭವಾಗಲಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಈ ಯಾತ್ರೆ ರಾಜ್ಯದಲ್ಲಿ 21 ದಿನ ನಡೆಯಲಿದೆ. ಒಟ್ಟು 12 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ನಡೆಯುವ ಯಾತ್ರೆಯ ಲೋಗೋ ಟ್ಯಾಗ್ ಲೈನ್ ಮತ್ತು ವೆಬ್​​ಸೈಟ್​​ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

 ಪಾದಯಾತ್ರೆಯ ಅಂತಿಮ ಮಾರ್ಗ ನಿಗದಿಯಾಗಿದೆ. ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಪಂಜಾಬ್, ಚಂಡಿಗಢ ಮತ್ತು ಜಮ್ಮು ಕಾಶ್ಮೀರವನ್ನು ಒಳಗೊಂಡಿರಲಿದೆ. ಪಾದಯಾತ್ರೆಯ ಒಟ್ಟಾರೆ ಸಂಚಾರದಲ್ಲಿ 21 ದಿನ ಬೆಂಗಳೂರಿನಲ್ಲಿಯೇ ರಾಹುಲ್ ಗಾಂಧಿ ಸಂಚರಿಸಲಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಇವರಿಗೆ ಸಾಥ್​ ನೀಡಲಿದ್ದಾರೆ.

Share Post

Leave a Reply

Your email address will not be published.