ಪ್ರಾಣ ಪಣಕ್ಕಿಟ್ಟು14 ಮಂದಿ ಜೀವ ಉಳಿಸಿದ ಭಾರತೀಯ ಸೇನೆ

ಕಾಶ್ಮೀರ: ಅವಳಿ ಹಿಮಕುಸಿತದಲ್ಲಿ ಸಿಲುಕಿದ್ದ 14 ಮಂದಿ ನಾಗರೀಕರನ್ನು ರಕ್ಷಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ರಕ್ಷಿಸಿದವರನ್ನು ಸೇನಾ ಶಿಬಿರಕ್ಕೆ ಕರೆದೊಯ್ದು ಊಟ, ವಸತಿ ವ್ಯವಸ್ತೆಯನ್ನು ಕಲ್ಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತದಲ್ಲಿ ವಾಹನ ಸಮೇತ ಒಂದು ಮಗು ಸೇರಿದಂತೆ ಹದಿನಾಲ್ಕು ಮಂದಿ ಸಿಲುಕಿದ್ದರು. ವಿಚಾರ ತಿಳಿಯುತ್ತಿದ್ದಂತೆ GREF ಜೊತೆಗೆ ಕ್ಯಾಪ್ಟನ್ ಕುಲ್ಜೋತ್ ಸಿಂಗ್ ನೇತೃತ್ವದಲ್ಲಿ ನೀಲಂ ಕಂಪನಿಯ ಆಪರೇಟಿಂಗ್ ಬೇಸ್‌ನಿಂದ ಸೇನೆಯ ಹಿಮಪಾತ ರಕ್ಷಣಾ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಗಿ ಎಲ್ಲರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಿಸಿದವರಲ್ಲಿ ತೀವ್ರ ಅಸ್ವಸ್ಥವಾಗಿದ್ದ ಓರ್ವ ಹೃದ್ರೋಗಿ, ಮಹಿಳೆಯರು ಒಂದು ಹಸುಗೂಸು ಸೇರಿದಂತೆ ಹದಿನಾಲ್ಕು ಮಕ್ಕಳು ಇದ್ದರು ಎಲ್ಲರನ್ನು ರಕ್ಷಿಸಿ ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಬಿಸಿಯೂಟದ ವ್ಯವಸ್ತೆಯನ್ನು ಮಾಡಿದ್ದಾರೆ. ತಮ್ಮ ಪ್ರಾಣ ರಕ್ಷಣೆ ಮಾಡಿದ್ದಕ್ಕೆ ನಾಗರೀಕರು ಯೋಧರಿಗರ ಧನ್ಯವಾದಗಳನ್ನು ಅರ್ಪಿಸಿದ್ದಾರೆಂದು ಸೇನೆ ವಕ್ತಾರರು ತಿಳಿಸಿದ್ದಾರೆ.

Share Post