ಇದು ಭಾರತದ ಕೊನೆಯ ಗ್ರಾಮ; ಇದು ಎರಡು ದೇಶಗಳ ಸೊತ್ತು..!

ಲಾಂಗ್ವಾ;  ಭಾರತದಲ್ಲಿ ಎಷ್ಟೋ ವಿಚಿತ್ರಗಳಿವೆ.. ವಿಲಕ್ಷಣ ಸ್ಥಳಗಳಿವೆ… ಅಚ್ಚರಿಗೆ ಕಾರಣವಾಗುವ ತಾಣಗಳಿವೆ.. ಅವುಗಳಲ್ಲಿ ಲಾಂಗ್ವಾ ಅನ್ನೋ ಗ್ರಾಮ ಕೂಡಾ ಒಂದು.. ಇದು ಭಾರತದ ಕಟ್ಟಕಡೆಯ ಗ್ರಾಮ.. ಹಾಗಂತ ಲಾಂಗ್ವಾ ಗ್ರಾಮ ಪೂರ್ತಿ ನಮ್ಮದೇ ಅಂದ್ರೆ ಮ್ಯಾನ್ಮಾರ್‌ ನವ್ರು ಜಗಳಕ್ಕೆ ಬಿದ್ದುಬಿಡ್ತಾರೆ.. ಯಾಕಂದ್ರೆ, ಇದು ಎರಡು ದೇಶಗಳಲ್ಲಿ ಹಂಚಿಹೋಗಿದೆ…

 

ಹೌದು, ಲಾಂಗ್ವಾ ಗ್ರಾಮ ಭಾರತ ದೇಶಕ್ಕೂ ಸೇರುತ್ತೆ, ಮ್ಯಾನ್ಮಾರ್‌ಗೂ ಸೇರುತ್ತೆ… ನಾಗಾಲ್ಯಾಂಡ್‌ ಹಾಗೂ ಮ್ಯಾನ್ಮಾರ್‌ ಗಡಿಯ ಸೋಮ ಜಿಲ್ಲೆಯಲ್ಲಿರುವ ಭಾರತದ ಕೊನೆಯ ಗ್ರಾಮ ಇದು.. ಈ ಗ್ರಾಮದ ಅರ್ಧ ಭಾಗ ಭಾರತಕ್ಕೆ ಸೇರಿದ್ರೆ, ಇನ್ನರ್ಧ ಮ್ಯಾನ್ಮಾರ್‌ದು.. ಹೀಗಾಗಿ, ಇಲ್ಲಿನ ಜನ ದಿನಕ್ಕೆ ಹಲವಾರು ಬಾರಿ ಎರಡು ದೇಶಗಳ ನಡುವೆ ಓಡಾಡುತ್ತಾರೆ.. ಊಟ ಒಂದು ದೇಶದಲ್ಲಿ ಮಾಡಿದರೆ, ಮಲಗೋದು ಇನ್ನೊಂದು ದೇಶದಲ್ಲಿ…

 

ಲಾಂಗ್ವಾ ಗ್ರಾಮದ ಅರ್ಧದಷ್ಟು ಮನೆಗಳ ಅಡುಗೆ ಕೋಣೆಗಳು ಭಾರತದಲ್ಲಿದ್ದರೆ, ಮಲಗೋ ಕೋಣೆಗಳು ಮ್ಯಾನ್ಮಾರ್‌ನಲ್ಲಿವೆ.. ಇನ್ನು ಕೆಲವರ ಮನೆಗಳು ಭಾರತದಲ್ಲಿದ್ದರೆ, ಅವರು ಕೃಷಿ ಮಾಡೋ ಭೂಮಿ ಮ್ಯಾನ್ಮಾರ್‌ನಲ್ಲಿದೆ..   ಇಲ್ಲ ಮ್ಯಾನ್ಮಾರ್‌ನಲ್ಲಿ ಮನೆ ಇದ್ದರೆ, ಅವರ ಕೃಷಿ ಭೂಮಿ ಭಾರತದಲ್ಲಿರುತ್ತೆ… ಹೀಗಾಗಿ, ಈ ಗ್ರಾಮದ ಜನ ಎರಡೂ ದೇಶಗಳ ಸೊತ್ತು.. ಅಷ್ಟೇ, ಕ್ಷಣಾರ್ಧದಲ್ಲಿ ಇಲ್ಲಿರುವವರು ದೇಶಾಂತರ ಮಾಡಬಹುದು.. ಕಣ್ಣು ಮಿಟುಕಿಸೋದ್ರಲ್ಲಿ ಭಾರತದಿಂದ ಮ್ಯಾನ್ಮಾರ್‌ಗೆ ಹೋಗಬಹುದು, ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಷ್ಟೇ ವೇಗವಾಗಿ ಬರಲೂ ಬಹುದು.. ಎಷ್ಟು ವಿಶೇಷ ಅಲ್ಲವೇ..?

 

ಈ ಗ್ರಾಮದ ಮುಖ್ಯಸ್ಥನಿಗೆ 60 ಹೆಂಡತಿಯರಿದ್ದಾರಂತೆ… ಈತ ನಾಗಾಲ್ಯಾಂಡ್‌, ಅರುಣಾಚಲಪ್ರದೇಶ ಹಾಗೂ ಮ್ಯಾನ್ಮಾರ್‌ನ ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಪ್ರಾಬಲ್ಯ ಹೊಂದಿದ್ದಾನೆ.. ಹೋದಲ್ಲೆಲ್ಲಾ ಆತನಿಗೆ ಸಂಸಾರವಿದೆಯಂತೆ.. ಈ ಗ್ರಾಮಕ್ಕೂ ಮುಖಂಡನೂ ಒಂದು ವಿಶೇಷವೇ ಸರಿ..

 

ಈ ಲಾಂಗ್ವಾ ಗ್ರಾಮದ ಮತ್ತೊಂದು ವಿಶೇಷತೆ ಏನಂದ್ರೆ, ಇಲ್ಲಿ ವಾಸ ಮಾಡುವ ಕೆಲವರು ಭಾರತೀಯ ಸೇನೆಗೆ ಸೇರಿದರೆ, ಮತ್ತೆ ಕೆಲವರು ಮ್ಯಾನ್ಮಾರ್ ಸೇನೆಗೆ ಸೇರುತ್ತಾರೆ.. ಎರಡು ದೇಶದ ಜನರು ಅತ್ಯುತ್ತಮವಾದ ಒಡನಾಟವನ್ನು ಹೊಂದಿದ್ದಾರೆ..

 

Share Post