ಅಕ್ಟೋಬರ್‌ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್‌ 10 ಆವೃತ್ತಿ

ಬೆಂಗಳೂರು; ಮತ್ತೊಂದು ಬೃಹತ್‌ ಮ್ಯಾರಥಾನ್‌ಗೆ ಬೆಂಗಳೂರು ಸಜ್ಜಾಗುತ್ತಿದೆ. ಅಕ್ಟೋಬರ್‌ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್‌ ಹತ್ತನೇ ಆವೃತ್ತಿ ಆಯೋಜನೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮ್ಯಾರಥಾನ್‌ ಸಂಸ್ಥೆಯಿಂದ ಈ ಮ್ಯಾರಥಾನ್‌ ಮಾನ್ಯತೆ ಪಡೆದಿದೆ. ಖಾಸಗಿ ಹೋಟೆಲ್‌ನಲ್ಲಿ ಈ ಮ್ಯಾರಥಾನ್‌ನ 10ನೇ ಅವೃತ್ತಿ ಲೋಗೋ ಅನಾವರಣ ಮಾಡಲಾಯಿತು.

ಈ ಮ್ಯಾರಥಾನ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಸಿಟಿ ರನ್ ಮೂರು ವಿಭಾಗಗಳಲ್ಲಿ ನಡೆಯಲಿದೆ. 42 ಕಿಮೀ ಪೂರ್ಣ ಮ್ಯಾರಥಾನ್, 21 ಕಿಮೀ ಹಾಫ್ ಮ್ಯಾರಥಾನ್, 5 ಕಿಮೀ ಹೋಪ್ ರನ್ ಇರಲಿದೆ.

Share Post