ಮುಂದಿನ ವರ್ಷದಿಂದ ಜಾನ್ಸನ್‌ ಬೇಬಿ ಪೌಡರ್‌ ಸಿಗೋದಿಲ್ಲ!

ಚಿಕ್ಕ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಹುತೇಕ ಜಾನ್ಸನ್‌ ಅಂಡ್‌ ಜಾನ್ಸನ್‌ ಪ್ರಾಡಕ್ಟ್‌ ಕಾಣಿಸಿಯೇ ಕಾಣಿಸುತ್ತವೆ.  ಮಗು ಹುಟ್ಟಿದೆ ಅಂದ್ರೆ ನೋಡಲು ಬರುವ ಸಂಬಂಧಿಕರು, ಸ್ನೇಹಿತರು, ಜಾನ್ಸನ್‌ ಅಂಡ್‌ ಜಾನ್ಸನ್‌ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡೋ ಸಶಂಪ್ರದಾಯ ಕೂಡಾ ಬೆಳೆದಿದೆ. ಸುಮಾರು 130 ವರ್ಷಗಳಿಂದ ಇರುವ ಈ ಕಂಪನಿ ಬೇಬಿ ಪೌಡರ್‌, ಶಾಂಪೂ, ಸೋಪು ಮಾರಾಟದಲ್ಲಿ ಹೆಸರುವಾಸಿ. ಆದ್ರೆ, ಈ ಜಾನ್ಸನ್‌ ಅಂಡ್‌ ಜಾನ್ಸನ್‌ ಬೇಬಿ ಪೌಡರ್‌ ಮುಂದಿನ ವರ್ಷದಿಂದ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಯಾಕಂದ್ರೆ, ಜಾನ್ಸನ್‌ ಕಂಪನಿ ಬೇಬಿ ಪೌಡರ್‌ ಉತ್ಪಾದನೆಯನ್ನು ನಿಲ್ಲಿಸುವುದಕ್ಕೆ ತೀರ್ಮಾನ ಮಾಡಿದೆ

   ಅಮೆರಿಕದಲ್ಲಿ ಈಗಾಗಲೇ ಜಾನ್ಸನ್‌ ಅಂಡ್‌ ಜಾನ್ಸನ್‌ ಬೇಬಿ ಪೌಡರ್‌ ಮಾರಾಟ ನಿಲ್ಲಿಸಿ ಎರಡು ವರ್ಷಗಳೇ ಕಳೆದಿವೆ. ಬೇಬಿ ಪೌಡರ್‌ನಲ್ಲಿ ಕ್ಯಾನ್ಸರ್‌ ಕಾರಕ ರಾಸಾಯನಿಕ ಇದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಸಾವಿರಾರು ಕೇಸ್‌ಗಳನ್ನು ದಾಖಲಾಗಿವೆ. ಹೀಗಿದ್ದರೂ ಕಂಪನಿ, ದಶಕಗಳ ಕಾಲ ಸಂಶೋಧನೆ ಮಾಡಲಾಗಿದೆ. ನಮ್ಮ ಉತ್ಪನ್ನಗಳು ಸುರಕ್ಷಿತ ಎಂದು ಸಾಬೀತಾಗಿದೆ ಎಂದು ಸಮರ್ಥಿಸುತ್ತಲೇ ಬಂದಿತ್ತು.

   ಆದ್ರೆ ಜಾನ್ಸನ್‌ ಅಂಡ್‌ ಜಾನ್ಸನ್‌ ಕಂಪನಿ ಇದೀಗ ಮುಸುಕಿನ ಜೋಳದ ಹಿಂಡಿಯನ್ನು ಬಳಸಿ ಪೌಡರ್‌ ತಯಾರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬೇಬಿ ಪೌಡರ್‌ ಉತ್ಪಾದನೆಯನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಜಾನ್ಸನ್‌ ಅಂಡ್‌ ಜಾನ್ಸನ್‌ ಬೇಬಿ ಪೌಡರ್‌ ಮಾರುಕಟ್ಟೆಗಳಲ್ಲಿ ಸಿಗೋದಿಲ್ಲ

Share Post