ಗಣರಾಜ್ಯೋತ್ಸವ ಪರೇಡ್‌; ಕರ್ನಾಟಕ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ

ನವದೆಹಲಿ; ಈ ಬಾರಿಯ ಗಣರಾಜ್ಯೋತ್ಸ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಿಲ್ಲದಿದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇದನ್ನರಿತ ಕೇಂದ್ರ ಸರ್ಕಾರ ಕೊನೆ ಕ್ಷಣದಲ್ಲಿ ಕರ್ನಾಟಕದ ನಾರಿ ಶಕ್ತಿ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿದೆ. ಜನವರಿ 26ರಂದು ದೆಹಲಿಯ ರಾಜಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದ ಸ್ತಬ್ಧಚಿತ್ರ ಕೂಡಾ ಪಾಲ್ಗೊಳ್ಳುತ್ತಿದೆ.

ಇದು ರಾಜ್ಯದಿಂದ ಪಾಲ್ಗೊಳ್ಳುತ್ತಿರುವ 14ನೇ ಸ್ತಬ್ಧಚಿತ್ರ. ಪದ್ಮಶ್ರೀ ಪುರಸ್ಕೃತ ಮಹಿಳಾ ಸಾಧಕರ ಸಾಧನೆ ಅನಾವರಣಗೊಳಿಸಲು ರಾಜ್ಯ ನಾರಿ ಶಕ್ತಿ ಕಲ್ಪನೆಯಲ್ಲಿ ಸ್ತಬ್ಧಚಿತ್ರ ತಯಾರಿಸಲಾಗಿದೆ. ಕರ್ನಾಟಕದ ಮೂವರು ಮಹಿಳಾ ಸಾಧಕಿಯರಾದ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಿಸಿಗೌಡ ಅವರ ಸಾಧನೆ ಈ ಸ್ತಬ್ಧಚಿತ್ರದಲ್ಲಿ ಅನಾವರಣವಾಗಲಿದೆ.

Share Post

Leave a Reply

Your email address will not be published.