ರಾಣಿ ಎಲಿಜಬೆತ್‌ ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ; ಬ್ರಿಟನ್ ರಾಣಿ 2ನೇ ಎಲಿಜಬೆತ್  ಅಂತ್ಯಕ್ರಿಯೆಯಲ್ಲಿ  ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ. ಭಾರತದ ಪರವಾಗಿ ಸಂತಾಪ ಸೂಚಿಸಲಿದ್ದಾರೆ.

ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 17 ರಿಂದ 19 ರ ವರೆಗೆ ಲಂಡನ್‌ಗೆ ಹೊರಡಲಿದ್ದಾರೆ. ಬ್ರಿಟನ್ ರಾಷ್ಟ್ರದ ಮಾಜಿ ಮುಖ್ಯಸ್ಥೆ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥೆ ರಾಣಿ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8 ರಂದು ನಿಧನರಾದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಖರ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Share Post

Leave a Reply

Your email address will not be published.