ಮುಂದಿನ ಶಾಂಘೈ ಶೃಂಗಸಭೆ; ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ

ಉಜ್ಬೇಕಿಸ್ತಾನ್‌ ; ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

ಉಜ್ಬೇಕಿಸ್ತಾನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯ ವಿಸ್ತೃತ ಅಧಿವೇಶನದಲ್ಲಿ ಮಾತನಾಡಿದ ಜಿನ್‌ಪಿಂಗ್ ಅವರು, ಈ ವೇಳೆ ಮುಂದಿನ ವರ್ಷ ನಡೆಯಲಿರುವ ಎಸ್‌ಸಿಒ ಶೃಂಗಸಭೆಯ ಭಾರತದ ಅಧ್ಯಕ್ಷತೆಗೆ ಚೀನಾದ ಬೆಂಬಲವಿದೆ ಎಂದು ಹೇಳಿದ್ದಾರೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಿಎಂ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಸಿದ್ಧರಾಗಿದ್ದು ಈ ವೇಳೆ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಭಾರತಕ್ಕೆ ಅಭಿನಂದನಾ ಸಂದೇಶವನ್ನು ಸಹ ರವಾನಿಸಲಿದ್ದಾರೆ.

ಇಂದು 22ನೇ ಎಸ್‌ಸಿಒ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಕೋವಿಡ್ -19 ಸಾಂಕ್ರಾಮಿಕದ ನಂತರ ಜಗತ್ತು ಆರ್ಥಿಕ ಚೇತರಿಕೆಯ ಸವಾಲುಗಳನ್ನು ಎದುರಿಸುತ್ತಿವೆ. ಇದರ ನಡುವೆ ಎಸ್‌ಸಿಒ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಜಾಗತಿಕ ಜಿಡಿಪಿಯ ಶೇಕಡಾ 30ರಷ್ಟು ಕೊಡುಗೆಯನ್ನು ಎಸ್‌ಸಿಒ ದೇಶಗಳು ನೀಡುತ್ತಿದೆ. ಇನ್ನು ವಿಶ್ವದ ಜನಸಂಖ್ಯೆಯ ಶೇಕಡ 40 ಪ್ರತಿಶತವನ್ನು ಹೊಂದಿದೆ ಎಂದರು.

Share Post

Leave a Reply

Your email address will not be published.