ಜಾಗತಿಕ ಹೂಡಿಕೆದಾರರ ಸಮಾವೇಶ; ಜಪಾನ್‌ ಕಂಪನಿಗೆ ಆಹ್ವಾನ

ಟೋಕಿಯೋ; ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿ ಮತ್ತು ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಅವರು ಜಪಾನ್ ಮೂಲದ ಹಿಟಾಚಿ ಕಂಪನಿ ಅಧಿಕಾರಿಗಳನ್ನು ಟೋಕಿಯೋದಲ್ಲಿ ಇಂದು ಭೇಟಿಯಾದರು.  ನವೆಂಬರ್‌ 2 ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್‌ಶೋನ ಭಾಗವಾಗಿ ರಾಜ್ಯ ನಿಯೋಗವು ಜಪಾನ್‌ಗೆ ಮೂರು ದಿನಗಳ ಭೇಟಿ ಕೈಗೊಂಡಿದೆ.

ಹಿಟಾಚಿ ಉಪಾಧ್ಯಕ್ಷ, ಪ್ರಾದೇಶಿಕ ಕಾರ್ಯತಂತ್ರಗಳ ಕಾರ್ಯನಿರ್ವಾಹಕ ಅಧಿಕಾರಿ ಕೊಜಿನ್ ನಕಾಕಿತಾ, ಉಪಾಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ನೊರಿಹಿರೊ ಸುಜುಕಿ ಹಾಗೂ ಕಾರ್ಪೊರೇಟ್ ಅಧಿಕಾರಿ, ಪ್ರಧಾನ ವ್ಯವಸ್ಥಾಪಕ ಅಯುಮು ಮೊರಿಟಾ ಅವರನ್ನು ರಾಜ್ಯ ನಿಯೋಗ ಭೇಟಿ ಮಾಡಿತು.

Share Post

Leave a Reply

Your email address will not be published.