ಹಂಪಿಯಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆ; ಜುಲೈನಲ್ಲಿ ನಡೆಯಲಿದೆ ಸಭೆ

ವಿಜಯನಗರ: ದಕ್ಷಿಣ ಕಾಶಿ ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದೆ ಎಂದು ಹಂಪಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ತಿಳಿಸಿದ್ದಾರೆ.

2023 ರ ಜಿ-20 ಶೃಂಗಸಭೆ ಭಾರತದಲ್ಲಿ ನಡೆಯುತ್ತಿದ್ದು ಇದರ ಒಂದು ಸಭೆಯನ್ನ ಹಂಪಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಎಲ್ಲಾ ರೀತಿಯ ಸಿದ್ದತೆ ನಡೆಯುತ್ತಿದೆ ಎಂದರು.

ಜುಲೈ ನಲ್ಲಿ ಒಂದು ಸಭೆ ಹಂಪಿಯಲ್ಲಿ ನಡೆಯಲಿದ್ದು ಈಗಾಗಲೇ ವಿದೇಶಾಂಗ ಇಲಾಖೆಯ ಅಧಿಕಾರಿಗಳು, ಜಂಟಿ ಕಾರ್ಯದರ್ಶಿಗಳು ಭೇಟಿ ನೀಡಿ ಪೂರ್ವ ಸಿದ್ದತೆ ಸಭೆಗಳನ್ನ ಎರಡು ದಿನಗಳಿಂದ ಸಭೆ ನಡೆಸಿದ್ದಾರೆ.

ಜಿ-20 ನಾಯಕರ ಸಭೆ, ಸಮಾರಂಭ, ಆಗಮಿಸುವ ಗಣ್ಯರಿಗೆ ವಸತಿ, ಸಾರಿಗೆ ಸೇರಿದಂತೆ ಹಲವು ವ್ಯವಸ್ಥೆಗಳನ್ನ ಮಾಡಲು ವಿಜಯನಗರ ಜಿಲ್ಲಾಡಳಿತ ಹಾಗೂ ಕೊಪ್ಪಳ, ಬಳ್ಳಾರಿ‌ ಜಿಲ್ಲಾಡಳಿತ ಸೇರಿ ಯಾವ ಯಾವ ಸ್ಥಳದಲ್ಲಿ ಸಭೆಯನ್ನ ನಡೆಸಬಹುದು ಎಂಬುದನ್ನ ಚರ್ಚೆ ಮಾಡಲಾಗಿದೆ.

ವಿದೇಶಾಂಗ ಇಲಾಖೆ ಅಧಿಕಾರಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಸಭೆಯ ಉಸ್ತುವಾರಿ ವಹಿಸಿಕೊಂಡಿರು ವ ಸಂಸ್ಥೆ ಗಳ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ‌. ಹಲವಾರು ಸ್ಥಳಗಳನ್ನ ಸೂಚಿಸಿದ್ದೆವೆ ಇದುವರೆಗೂ ಸ್ಥಳ ಆಯ್ಕೆ ಮಾಡಿಲ್ಲ ಎಂದರು.

Share Post

Leave a Reply

Your email address will not be published.