ಬಾರ್ಡರ್‌-ಗವಾಸ್ಕರ್‌ ಸರಣಿ; ಆಸ್ಟ್ರೇಲಿಯಾಗೆ ಜಯ, ಭಾರತಕ್ಕೆ ಹೀನಾಯ ಸೋಲು

ಇಂದೋರ್; ಬಾರ್ಡರ್‌-ಗವಾಸ್ಕರ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಒಂಬತ್ತು ವಿಕೆಟ್‌ಗಳ ಅಂತರದಿಂದ ಆಸಿಸ್‌ ಜಯ ದಾಖಲಿಸಿದೆ.

ಇಂದೋರ್‌ನ ಹೋಳ್ಕರ್‌ ಕ್ರಿಕೆಟ್‌ ಮೈದಾನದಲ್ಲಿ ಈ ಟೆಸ್ಟ್‌ ಪಂದ್ಯ ನಡೆಯಿತು. ಈ ಗೆಲವಿನಿಂದಾಗಿ ಆಸ್ಟ್ರೇಲಿಯಾ ಗೆಲುವಿನ ಅಂತರವನ್ನು 2-1ಕ್ಕೆ ತಗ್ಗಿಸಿಕೊಂಡಿದೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಆಸ್ಟ್ರೇಲಿಯಾ ಎರಡು ಟೆಸ್ಟ್‌ ಪಂದ್ಯಗಳನ್ನು ಹೀನಾಯವಾಗಿ ಸೋತಿತ್ತು.

Share Post