ಧರ್ಮಸ್ಥಳದ ಇತಿಹಾಸ ನಿಮಗೆ ಗೊತ್ತೇ..?; ಈ ಹೆಸರು ಬಂದಿದ್ದು ಹೇಗೆ..?

ಧರ್ಮಸ್ಥಳ;  ಕರ್ನಾಟಕ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ. ಶಿವನ ಧಾರ್ಮಿಕ ಕ್ಷೇತ್ರವಾದ ಈ ದೇಗುಲದಲ ಆಡಳಿತದ ನಡೆಸುತ್ತಿರುವವರು ಜೈನರು ಇದು ಇಲ್ಲಿನ ವಿಶೇಷ ಸಂಗತಿಯಾಗಿದೆ. ಕೇರಳ ದೇಗುಲದ ವಾಸ್ತುಶಿಲ್ಪ ಮಾದರಿಯಲ್ಲಿ ಶ್ರೀ ಮಂಜುನಾಥ ದೇವಾಲಯ ಇದೆ.

ನಡೆದು ಬಂದ ಕಥೆ ಅನುಸಾರ ಈ ಧರ್ಮಸ್ಥಳವನ್ನು ಹಿಂದೆ ಕುಡುಮಾ ಎಂದು ಕರೆಯಲಾಗುತ್ತಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅವ ಪತ್ನಿ ಅಮ್ಮ ಬಲ್ಲಲ್ತಿ ಅವರು ಇಲ್ಲಿನ ನೆಲ್ಲಾಡಿ ಬೀಡು ಎಂಬಲ್ಲಿ ವಾಸಿಸುತ್ತಿದ್ದರು. ದಾನ ಧರ್ಮಕ್ಕೆ ಹೆಸರಾಗಿದ್ದ ಇವರಿಗೆ ಒಮ್ಮೆ ಧರ್ಮ ದೈವಗಳು ಕಾಣಿಸಿಕೊಂಡು ನೆಲ್ಲಾಡಿ ಬೀಡುವಿನಲ್ಲಿ ಧರ್ಮ ದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಅಲ್ಲದೇ ಧರ್ಮವನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸುವಂತೆ ತಿಳಿಸಿದರು.

Share Post

Leave a Reply

Your email address will not be published.