ಪುದುಚೆರಿ ವಿನಾಯಕ ದೇಗುಲದ ಆನೆ ಹೃದಯಾಘಾತಕ್ಕೆ ಬಲಿ

ಪುದುಚೇರಿ; ಪುದುಚೆರಿಯ ಮನಕುಲ ವಿನಾಯಕ ದೇಗುಲದಲ್ಲಿದ್ದ ಆನೆಯೊಂದು ಹೃದಯಾಘಾತದಿಂದ ಸಾವನ್ನಪ್ಪಿದೆ. ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಲಕ್ಷ್ಮೀ ಹೆಸರಿನ ಈ ಆನೆ ವಿಹಾರ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದೆ.

ಆನೆಗೆ ಯಾವುದೇ ಕಾಯಿಲೆಗಳು ಇರಲಿಲ್ಲ, ಆರೋಗ್ಯವಾಗಿತ್ತು. ಆದ್ರೆ ಅದು ದಿಢೀರ್‌ ಅಂತ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದೆ. ಇದನ್ನು ಪಶು ವೈದ್ಯರು ಕೂಡಾ ಖಚಿತಪಡಿಸಿದ್ದಾರೆ. 1995ರಲ್ಲಿ ಈ ಆನೆಯನ್ನು ಉದ್ಯಮಿಯೊಬ್ಬರು ವಿನಾಯಕ ದೇವಸ್ಥಾನಕ್ಕೆ ದಾನ ನೀಡಿದ್ದರು. ಈ ಲಕ್ಷ್ಮೀ ಆನೆಯ ಆಶೀರ್ವಾದ ಪಡೆಯಲು ಕೇರಳ, ಆಂಧ್ರ, ಕರ್ನಾಟಕ, ತಮಿಳುನಾಡಿನಿಂದ ಭಕ್ತರು ಆಗಮಿಸುತ್ತಿದ್ದರು. ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಲಕ್ಷ್ಮಿಯ ಅಂತ್ಯಕ್ರಿಯೆ ನಡೆಸಲಾಯಿತು.

Share Post

Leave a Reply

Your email address will not be published.