ಫುಟ್ಬಾಲ್‌ ದಂತಕಥೆ ಪೀಲೆ ಕ್ಯಾನ್ಸರ್‌ನಿಂದ ಸಾವು

ಬ್ರೆಜಿಲ್‌; ಫುಟ್ಬಾಲ್ ದಂತಕಥೆ ಪೀಲೆ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 82ರ ಹರೆಯದ ಬ್ರೆಜಿಲ್ ಆಟಗಾರ, ಆ ದೇಶದ ಸಾವೊ ಪೌಲೊದಲ್ಲಿರುವ ಐನ್ ಸ್ಟೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.
   21 ವರ್ಷಗಳ ಅವರ ಸುದೀರ್ಘ ಫುಟ್ಬಾಲ್ ವೃತ್ತಿಜೀವನದಲ್ಲಿ, ಪೀಲೆ 1,363 ಪಂದ್ಯಗಳನ್ನು ಆಡಿದ್ದು, 1,281 ಗೋಲುಗಳನ್ನು ಗಳಿಸಿದ್ದರು. ವಿಶ್ವದ ಯಾವುದೇ ಆಟಗಾರ ಇಷ್ಟು ಗೋಲು ಗಳಿಸಿಲ್ಲ. ಅವರು ತಮ್ಮ ದೇಶ ಬ್ರೆಜಿಲ್‌ಗಾಗಿ ಆಡುವಾಗ 77 ಗೋಲುಗಳನ್ನು ಗಳಿಸಿದರು. ಬ್ರೆಜಿಲ್ ಪರ 92 ಪಂದ್ಯಗಳನ್ನು ಆಡಿದ್ದಾರೆ.
   ಮೂರು ಬಾರಿ ಫುಟ್ಬಾಲ್ ವಿಶ್ವಕಪ್ ಗೆದ್ದ ಏಕೈಕ ಆಟಗಾರ ಕೂಡ ಪೀಲೆ. ಪೀಲೆ 1958, 1962 ಮತ್ತು 1970 ರಲ್ಲಿ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 2000ನೇ ಇಸವಿಯಲ್ಲಿ, ಪೀಲೆ ಅವರನ್ನು ಶತಮಾನದ ಅತ್ಯುತ್ತಮ ಆಟಗಾರ ಎಂದು ಫಿಫಾ ಘೋಷಿಸಿತ್ತು.
 ಪೀಲೆ ಕೆಲ ಸಮಯದಿಂದ ಕಿಡ್ನಿ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಸೆಪ್ಟೆಂಬರ್ 2021 ರಲ್ಲಿ, ಪೀಲೆ ಅವರು ಸಾವೊ ಪಾಲೊದಲ್ಲಿನ ಆಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ, ನವೆಂಬರ್ 2022 ರ ಕೊನೆಯಲ್ಲಿ, ಪೀಲೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Share Post

Leave a Reply

Your email address will not be published.