ವಿಮಾನದಲ್ಲೇ ಪ್ರಯಾಣಿಕ ಅಸ್ವಸ್ಥ; ತುರ್ತು ಲ್ಯಾಂಡಿಂಗ್‌ ವೇಳೆಗೆ ಸಾವು..!

ನವದೆಹಲಿ; ವಿಮಾನ ಪ್ರಯಾಣ ವೇಳೆ ಪ್ರಯಾಣಿಕರೊಬ್ಬರಿಗೆ ತೀವ್ರ ಅನಾರೋಗ್ಯವುಂಟಾಗಿದ್ದು, ವಿಮಾನ ತುರ್ತು ಲ್ಯಾಂಡಿಂಗ್‌ ಮಾಡುವ ವೇಳೆ ಆತ ಮೃತಪಟ್ಟಿದ್ದಾರೆ. ದೆಹಲಿಯಿಂದ ದೋಹಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಅಸ್ವಸ್ಥರಾಗಿದ್ದರಿಂದಾಗಿ ಕರಾಚಿಯಲ್ಲಿ ತುರ್ತು ಭುಸ್ಪರ್ಶ ಮಾಡಿಸಲಾಗಿಯಿತು. ಆದ್ರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಇಂಡಿಗೋ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಪ್ರಯಾಣಿಕರೊಬ್ಬರು ಕುಸಿದು ಬಿದ್ದಿದ್ದರಿಂದ ವಿಮಾನವನ್ನು ಕರಾಚಿಯಲ್ಲಿ ಲ್ಯಾಂಡ್‌ ಮಾಡಲಾಯ್ತು. ಆದ್ರೆ ಪರೀಕ್ಷಿಸಿದ ವೈದ್ಯರು ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೃತ ಪ್ರಯಾಣಿಕನ ದೇಹದೊಂದಿಗೆ ವಿಮಾನ ಮರಳಿ ದೆಹಲಿಗೆ ಬಂದಿದೆ.

Share Post