ದೇಶದಲ್ಲಿ 200ಕ್ಕೂ ಹೆಚ್ಚು ಓಮಿಕ್ರಾನ್‌ ಕೇಸ್‌ ಪತ್ತೆ

ನವದೆಹಲಿ : ಕೊರೊನಾ ಮೂರನೇ ರೂಪಾಂತರಿ ತಳಿಯಾಗಿರುವ ಓಮಿಕ್ರಾನ್‌ ತನ್ನ ತೀವ್ರತೆಯನ್ನು ಹೆಚ್ಚಿಸಿದಂತೆ ಕಾಣ್ತಿದೆ. ಈವರೆಗೂ 200ಕ್ಕೂ ಹೆಚ್ಚು ಮಂದಿಗೆ ಓಮಿಕ್ರಾನ್ ಸೋಂಕು ತಗುಲಿದೆ. ೭೭ ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

ಕೇಂದ್ರ ಆರೋಗ್ಯ ಪ್ರಕಟಿಸಿದ ಅಂಕಿ ಅಂಶದ ಪ್ರಕಾರ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ತಲಾ ೫೪ ಕೇಸ್‌ಗಳು ಪತ್ತೆಯಾಗಿದ್ದು ಮೊದಲ ಸ್ಥಾನ ಪಡೆದಿದೆ. ತೆಲಂಗಾಣದಲ್ಲಿ ೨೦ ಕೇಸ್‌ ಪತ್ತೆಯಾಗಿದ್ದು ಮೂರನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ೧೯ಕೇಸ್‌ಗಳು ಬಂದಿದೆ. ಇದರಿಂದ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ.

ಈ ಸೋಂಕು ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದರೆ ಸರ್ಕಾರವು ಮತ್ತೆ ಕಠಿಣ ನಿಯಮಗಳನ್ನು ಜಾರಿ ಮಾಡುವ ಆಲೋಚನೆ ಮಾಡಲಿದೆ. ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗೆ ಕೂಡ ಸರ್ಕಾರ ಬ್ರೇಕ್‌ ಹಾಕಲಿದೆ.

 

Share Post