ಬದಲಾವಣೆಗಾಗಿ ಯುವಕರು ಎಚ್ಚೆತ್ತುಕೊಳ್ಳಬೇಕು; ಡಿ.ಕೆ.ಶಿವಕುಮಾರ್‌

ಬೆಳಗಾವಿ; ಈ ದೇಶ ಹಾಗೂ ರಾಜ್ಯದಲ್ಲಿ ಬದಲಾವಣೆಯಾಗಬೇಕಾದರೆ ಯುವಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ರಾಹುಲ್‌ ಗಾಂಧಿಯವರು ಯುವಕರಿಗೆ ಕರೆ ಕೊಡಲು ಬೆಳಗಾವಿಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಗಾಂಧೀಜಿಯವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ಅದೇ ಸ್ಥಳದಿಂದ ರಾಹುಲ್‌ ಗಾಂಧಿ ಯಾತ್ರೆ ಶುರುವಾಗಿದೆ. ಯುವಕ್ರಾಂತಿ ಸಮಾವೇಶವನ್ನು ಇಂದು ಆಯೋಜಿಸಲಾಗಿದ್ದು, ರಾಹುಲ್‌ ಗಾಂಧಿಯವರು ಯುವಕರಿಗೆ ಬದಲಾವಣೆಗಾಗಿ ಕರೆ ಕೊಡಲಿದ್ದಾರೆ ಎಂದರು.

ಯುವಕರು, ಮಹಿಳೆಯರು ಒಗ್ಗಟ್ಟಾದಾಗ ಮಾತ್ರ ಬದಲಾವಣೆ ಸಾಧ್ಯ. ಹೀಗಾಗಿಯೇ ನಾವು ಮಹಿಳೆಯರು ಹಾಗೂ ಯುವಕರ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದ್ದೇವೆ. ಯುವಕರು ಹಾಗೂ ಮಹಿಳೆಯ ಅಭ್ಯದಯಕ್ಕಾಗಿ ಕಾಂಗ್ರೆಸ್‌ ಶ್ರಮಿಸುತ್ತದೆ. ಈಗಾಗಲೇ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ನೀಡೋದಾಗಿ ಘೋಷಣೆ ಮಾಡಿದ್ದೇವೆ. ಈಗ ನಾವು ಯುವಕ್ರಾಂತಿ ಸಮಾವೇಶ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ ನಮ್ಮನ್ನು ಅನುಸರಿಸಲು ಹೋಗುತ್ತಿದ್ದಾರೆ. ನಾವು ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಘೋಷಣೆ ಮಾಡಿದಾಗ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ್ದರು. ಅನಂತರ ಬಜೆಟ್‌ನಲ್ಲಿ ಮಹಿಳೆಯರಿಗೆ ಐದು ನೂರು ರೂಪಾಯಿ ಘೋಷಣೆ ಮಾಡಿದರು. ಅನಂತರ ಇನ್ನೊಂದು ಆರ್ಡರ್‌ ಮಾಡಿ ಅದನ್ನು ಒಂದು ಸಾವಿರ ರೂಪಾಯಿಗೆ ಏರಿಸಿದರು ಎಂದು ಡಿಕೆಶಿ ಹೇಳಿದ್ದಾರೆ.

Share Post