ಪ್ರವಾಹ ಬಂದಾಗ ಬರದ ಮೋದಿ ಈಗ ಯಾಕೆ ಬರುತ್ತಿದ್ದಾರೆ..?; ಖರ್ಗೆ ಪ್ರಶ್ನೆ

ಬೆಳಗಾವಿ; ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಪ್ರವಾಹ ಬಂದಾಗ ಈ ಕಡೆ ತಿರುಗಿ ನೋಡಲಿಲ್ಲ, ಕೊರೊನಾ ಬಂದಾಗ ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಎದುರಾಗಿತ್ತು. ಆಗ ಆಕ್ಸಿಜನ್‌ ಒದಗಿಸಲಿಲ್ಲ. ಆದ್ರೆ ಈಗ ಎಲೆಕ್ಷನ್‌ ಇದೆ ಆ ಕಾರಣಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ. ಬೆಳಗಾವಿಯ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜೀವ್‌ ಗಾಂಧಿಯವರು ೧೮ ವರ್ಷದ ತುಂಬದವರಿಗೆ ಮತದಾನದ ಹಕ್ಕು ಕೊಟ್ಟರು. ಯಾಕಂದ್ರೆ ದೇಶದಲ್ಲಿ ಏನೇ ಬದಲಾವಣೆಯಾಗಿದ್ದರೂ ಅದಕ್ಕೆ ಯುವ ಸಮುದಾಯ ಕಾರಣ. ಹೀಗಾಗಿ, ಚುನಾವಣೆಯಲ್ಲಿ ಯುವ ಸಮಯದಾಯ ಪಾಲ್ಗೊಳ್ಳಬೇಕು ಅನ್ನೋ ಕಾರಣಕ್ಕೆ ರಾಜೀವ್‌ ಗಾಂಧಿಯವರು ೧೮ ವರ್ಷ ತುಂಬಿದವರಿಗೆ ಮತದಾನದ ಹಕ್ಕನ್ನು ನೀಡಿದರು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಕ್ರಾಂತಿ ಮಾಡಿ ಉದ್ಯೋಗ ಸೃಷ್ಟಿ ಮಾಡಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮೋದಿಯವರು ಮೊದಲ ಬಾರಿ ಅಧಿಕಾರಕ್ಕೆ ಬೃುವ ಮೊದಲು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗಿ ಹೇಳಿದ್ದರು. ಆದ್ರೆ ಒಂಬತ್ತು ವರ್ಷ ಆಗಿದೆ. ಎಲ್ಲಿ ಉದ್ಯೋಗಿ ಕೊಟ್ಟಿದ್ದೀರಿ. ಮೋದಿ ಒಂಬತ್ತು ವರ್ಷದಲ್ಲಿ ನಿರುದ್ಯೋಗಿ ಯುವಕ, ಯುವತಿಯರು ನೀವು ಮಾಡಿದ್ದೇನು..? ಎಂದು ಖರ್ಗೆ ಪ್ರಶ್ನೆ ಮಾಡಿದರು.

ಮೋದಿ ಆಡಳಿತದಲ್ಲಿ ಯಾರಿಗೂ ಉದ್ಯೋಗ ಸಿಗಲಿಲ್ಲ. ಎಷ್ಟೋ ಜನ ಉದ್ಯೋಗ ಕಳೆದುಕೊಂಡರು. ೬೦ ಲಕ್ಷ ಸಣ್ಣ ಕೈಗಾರಿಕೆಗಳ ಮುಚ್ಚಿಹೋದವು. ೧೨ ಲಕ್ಷ ೮೯ ಸಾವಿರ ಪ್ರತಿಭಾ ಫಲಾಯನವಾಯಿತು. ಪ್ರತಿಭಾವಂತರು ಉದ್ಯೋಗಕ್ಕಾಗಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಅವರನ್ನು ತಡೆಯೋ ಪ್ರಯತ್ನ ನೀವು ಯಾಕೆ ಮಾಡಲಿಲ್ಲ ಎಂದು ಖರ್ಗೆ ಪ್ರಶ್ನೆ ಮಾಡಿದರು.

Share Post