ಹಳಿ ದಾಟುವಾಗ ರೈಲು ಡಿಕ್ಕಿ; ಇಬ್ಬರು ಮಹಿಳೆಯರ ದುರ್ಮರಣ

ಮಂಡ್ಯ; ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ರೈಲು ಹಳಿ ದಾಟುತ್ತಿರುವಾಗ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ವೇಗವಾಗಿ ಬಂದು ಗುದ್ದಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಮಂಡ್ಯ ರೈಲು ನಿಲ್ದಾಣದ ಬಳಿ ಈ ದಾರುಣ ಘಟನೆ ನಡೆದಿದೆ.

ಇಂದು ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಬಂದಿದ್ದ ಮಹಿಳೆ ಹಾಗೂ ವೃದ್ಧೆ ಮಂಡ್ಯ ರೈಲು ನಿಲ್ದಾಣದಲ್ಲಿ ಇಳಿದು ಹಳಿಯನ್ನು ದಾಟುತ್ತಿದ್ದರು. ಈ ವೇಳೆ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪೇಟೆ ಬೀದಿಯ ರೈಲ್ವೆ ಜಂಕ್ಷನ್‌ ದಾಟುವ ವೇಳೆ ಈ ದುರಂತ ನಡೆದಿದೆ.

ಮಂಡ್ಯದ ಬಸರಾಳು ಸಮೀಪದ ಹುರುಳಿ ಜವರನಕೊಪ್ಪಲು ಗ್ರಾಮದ ಶಶಿ ಮೃತ ಮಹಿಳೆ ಎಂದು ತಿಳಿದುಬಂದಿದೆ. ಅವರ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ಇಂದು ಸ್ವಂತ ಊರಿಗೆ ಬರುವಾಗ ಈ ದುರ್ಘಟನೆ ನಡೆದಿದೆ.

Share Post

Leave a Reply

Your email address will not be published.