ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟ ಸರ್ಕಾರ; ರಾಹುಲ್‌ ಗಾಂಧಿ

ಬೆಳಗಾವಿ; ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತಿ ಭ್ರಷ್ಟಾಚಾರ ಸರ್ಕಾರ, ನಲವತ್ತು ಪರ್ಸೆಂಟ್‌ ಸರ್ಕಾರ ಇದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಗುತ್ತಿಗೆದಾರರ ಸಂಘದಿಂಧ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ರಾಜ್ಯದಲ್ಲಿ ನಲವತ್ತು ಪರ್ಸೆಂಟ್‌ ಸರ್ಕಾರ ಇದೆ. ಕ್ರಮ ಕೈಗೊಳ್ಳಿ ಎಂದು ದೂರಲಾಗಿತ್ತು. ಆದ್ರೆ ಪ್ರಧಾನಿ ಮೋದಿಯವರು ಇದಕ್ಕೆ ಉತ್ತರವೇ ಕೊಡಲಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಎಲ್ಲದರಲ್ಲೂ ಕಮೀಷನ್‌ ಹೊಡೆಯುತ್ತಿದೆ. ಹೀಗಾಗಿ ಅದು ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಮೈಸೂರು ಸ್ಯಾಂಡಲ್‌ ಸೋಪ್ಸ್‌ ಲಿಮಿಟೆಡ್‌ನಲ್ಲಿ ಗುತ್ತಿಗೆ ಕೆಲಸ ನೀಡಲು ಬಿಜೆಪಿ ಶಾಸಕರ ಪುತ್ರ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದರು. ಪಿಎಸ್‌ಐ ನೇಮಕಾತಿ ಹಗರಣ, ಅಸಿಸ್ಟೆಂಟ್‌ ಪ್ರೊಫೆಸರ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಜಾಬ್‌ ಸ್ಕ್ಯಾಮ್‌ ನಡೆಯಿತು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹತ್ತಾರು ಹಗರಣಗಳು ಸಿಗುತ್ತವೆ ಎಂದು ರಾಹುಲ್‌ ಗಾಂಧಿ ಹೇಳಿದರು.

ನಾನು ಸಂಸತ್ತಿನಲ್ಲಿ ಅದಾನಿ ಬಗ್ಗೆ ಮಾತನಾಡಿದ್ದೆ. ಕೇಂದ್ರ ಸರ್ಕಾರ ದೇಶದ ಸಂಪತ್ತನ್ನೆಲ್ಲಾ ಅದಾನಿ ಕಂಪನಿಗೆ ನೀಡುತ್ತಿದೆ. ಯಾಕಂದ್ರೆ ಅದಾನಿ, ಪ್ರಧಾನಿ ಮೋದಿಯವರ ಸ್ನೇಹಿತರಾಗಿದ್ದಾರೆ ಎಂದು ಮೋದಿ ಆರೋಪಿಸಿದರು.

Share Post