ಸಚಿವನಾಗುವ ಆಸೆ ನನಗಿಲ್ಲ- ಎಂ.ಪಿ. ರೇಣುಕಾಚಾರ್ಯ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಎರಡು ದಿನಗಳ ಕಾಲ ಕಾರ್ಯಕಾರಿಣಿ ಸಭೆ ನಡೆಯತ್ತಿತ್ತು, ಬಿಸಿಯೇರಿದ ರಾಜಕೀಯ ಚರ್ಚೆಗಳು ಸಹ ನಡೆದಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ಕಾರ್ಯಕಾರಿಣಿ ಸಭೆ ತುಂಬಾ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಈ ಹಿಂದೆನೂ ಸಚಿವರಾಗಿ, ಈಗಲೂ ಸಚಿವರಾಗಿ ಇರುವಂತವರು ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು. ಇದ್ದರಿಂದ ಹೊಸಬರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಜೊತೆಗೆ ನನಗೆ ಸಚಿವನಾಗಬೇಕು ಎಂಬ ಆಸೆಯಿಲ್ಲ. ಆದರೆ ಹೊಸಬರಿಗೆ ಸಚಿವ ಸ್ಥಾನ ನೀಡಿದರೆ, ಅವರು ಮುಂದೆ ಅನುಭವಿಗಳಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು.
ಇನ್ನು ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿ, ಗುಜರಾತ್‌ ಮಾದರಿಯಲ್ಲಿ ರಾಜ್ಯದಲ್ಲೂ ಕೂಡ ಸಂಪುಟ ವಿಸ್ತರಣೆ ಆಗಬೇಕು.ಯಾವತ್ತೂ ನನಗೆ ಸಚಿವ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿನೇ ಹೆಚ್ಚು ಎಂದರು.
ಮೊನ್ನೆ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್‌ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚೆ ಮಾಡಲು ಬಿಟ್ಟಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ.ಈ ಕಾಯ್ದೆ ಜಾರಿಗಾಗಿ ಹಲವು ಸಾಧುಸಂತರು ಹಾಗೂ ಧಾರ್ಮಿಕ ಮುಖಂಡರು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಆದರೆ ಕಾಂಗ್ರೆಸ್‌ ಅದನ್ನು ತಡೆದು, ಆಸೆ ಆಮಿಷಕ್ಕೆ ಮತಾಂತರ ಅಗುತ್ತದೆ ಎಂದು ವ್ಯಂಗ್ಯವಾಡಿದರು.
ಅಂದಹಾಗೇ ಕಾಂಗ್ರೆಸಿಗರು ಸೋನಿಯಾ ಗಾಂಧಿ ಹೇಳಿದ ಮಾತುಗಳನ್ನು ಕೇಳುತ್ತಾರೆ. ಒಂದು ವೇಳೆ ಅವರಿಗೆ ತಾಕತ್ತಿದ್ದರೆ ನಾವು ಹಿಂದೂಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳಲಿ ಎಂದರು. ಈಗಾಗಲೇ ಕಾಂಗ್ರೆಸ್‌ ಪಕ್ಷಕ್ಕೆ ಗರ್ಭಪಾತವಾಗಿದೆ. ಆದರೆ ಅದು ಹೆಣ್ಣೋ ಗಂಡೋ ಎಂದು ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಬೇಕು ಎಂದು ಟೀಕೆ ಮಾಡಿದರು.ಇನ್ನು  ಅರುಣ್‌ ಸಿಂಗ್‌  ಸೂಕ್ಷ್ಮವಾಗಿ ನೀಡಿದ ಎಚ್ಚರಿಕೆಗೆ ಮಾತನಾಡುವುದನ್ನು ಬಿಟ್ಟು ಮಧ್ಯದಲ್ಲೇ ಅರುಣ್‌ ಸಿಂಗ್‌ ಅವರ ಬಳಿಗೆ ಕಾಲ್ಕಿತ್ತರು.

Share Post