ಮಲೆನಾಡಲ್ಲಿ ಮತ್ತೆ ಮಂಗನ ಖಾಯಿಲೆ ಭೀತಿ

ಚಿಕ್ಕಮಗಳೂರು; ಮಲೆನಾಡು ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಮತ್ತೆ ಮಂಗನ ಖಾಯಿಲೆ ಭೀತಿ ಶುರುವಾಗಿದ್ದು ಈ ವರ್ಷದ ಮೊದಲ ಕೆಎಫ್ ಡಿ( ಮಂಗನಖಾಯಿಲೆ) ಪ್ರಕರಣ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನಲ್ಲಿ ಬಾಳೆ ಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್ ಡಿ( ಮಂಗನ ಖಾಯಿಲೆ) ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಕೊಪ್ಪದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆ ಟಿಕ್ಸ್ ಕಳುಹಿಸಿತ್ತು.
ಮಂಗನ ಖಾಯಿಲೆ ಪತ್ತೆಯಿಂದ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹೈ ಹಲರ್ಟ್ ಆಗಿದೆ, ವ್ಯಕ್ತಿ ವಾಸವಿದ್ದ ಸ್ಥಳ ಹಾಗೂ: ಅಕ್ಕ ಪಕ್ಕದ ಮನೆಯವರ ಬಗ್ಗೆ ನಿಗಾವಹಿಸಲಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲೂ ಕೆಎಫ್ ಡಿ ಭೀತಿ ಶುರುವಾಗಿದೆ.

Share Post

Leave a Reply

Your email address will not be published.