ಬೀಳಗಿ ಮತ ಕ್ಷೇತ್ರಕ್ಕೆ ನಾಲ್ಕು ಆ್ಯಂಬುಲೆನ್ಸ್ ವಿತರಿಸಿದ ಸಚಿವರು

ಬಾಗಲಕೋಟೆ; ಬೀಳಗಿ ಮತ ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಬೀಳಗಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಮುರುಗೇಶ್ ನಿರಾಣಿ ಅವರು ರೇಣುಕಾ ಶುಗರ್ಸ್ ವತಿಯಿಂದ ನಾಲ್ಕು ಆ್ಯಂಬುಲೆನ್ಸ್ ಗಳನ್ನು ವಿತರಿಸಿದರು.

ನವನಗರದಲ್ಲಿರುವ ಎಂಆರ್‌ಎನ್ಎ ಫೌಂಡೇಶನ್ ದ ತೇಜಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಬೀಳಗಿ ಮತ ಕ್ಷೇತ್ರದ ಜನರ ಆರೋಗ್ಯವನ್ನು ಕಾಪಾಡಲು ಸಚಿವರು ಆ್ಯಂಬುಲೆನ್ಸ್ ಗಳನ್ನು ವಿತರಣೆ ಮಾಡಿದರು.

ಈ ವೇಳೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಮಾನ್ಯ ಶ್ರೀ ಡಾ: ಮುರುಗೇಶ್ ನಿರಾಣಿ ಅವರು, ರೇಣುಕಾ ಶುಗರ್ಸ್ ದ ಸಿನಿಯರ್ ವೈಸ್ ಪ್ರೆಸಿಡೆಂಟ್ ವಿಪಿನ್ ಕುಮಾರ್ ರಾಟಿ, ಡಾ: ಗೋವಿಂದ ಮಿಸಾಳೆ ವೈಸ್ ಪ್ರೆಸಿಡೆಂಟ್, ಎಂ.ಆರ್ ನೀರಲಕರ್ ಎಜುಕೇಟಿವ್ ಡೈರೆಕ್ಟರ್, ಜಿಲ್ಲಾ ವೈದ್ಯಾಧಿಕಾರಿ ಜಯಶ್ರೀ ಎಮ್ಮಿ, ಬೀಳಗಿ ತಾಲೂಕಾ ವೈದ್ಯಾಧಿಕಾರಿ ಡಾ : ಕರಿಯನ್ನವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ ಬೀಳಗಿ ಮತ ಕ್ಷೇತ್ರಕ್ಕೆ ನಾಲ್ಕು ಆಂಬುಲೆನ್ಸ್ ಗಳನ್ನು ವಿತರಣೆ ಮಾಡಲಾಯಿತು.

Share Post

Leave a Reply

Your email address will not be published.