ಕಲ್ಪನೆ ಮಾಡಿ ಬರೆಯುವುದು ಇತಿಹಾಸವಲ್ಲ, ಕಾದಂಬರಿ; ನಿರ್ಮಲಾನಂದ ಶ್ರೀ

ಮಂಡ್ಯ; ರಾಜ್ಯಕ್ಕೆ ಮಾಡಬೇಕಾಗಿರುವ ಕೆಲಸಗಳು ತುಂಬಾ ಇದೆ. ಆದ್ರೆ ಅದೆಲ್ಲವನ್ನೂ ಬಿಟ್ಟು ಉರಿಗೌಡ, ನಂಜೇಗೌಡರ ವಿಚಾರಗಳು ಚರ್ಚೆಯಾಗುತ್ತಿವೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿರುವ ಅವರು, ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಕಲ್ಪನೆ ಮಾಡಿ ಬರೆಯುವುದನ್ನು ಇತಿಹಾಸ ಎಂದು ಹೇಳುವುದಕ್ಕೆ ಆಗುವುದಿಲ್ಲ, ಅದನ್ನು ಕಾದಂಬರಿ ಎನ್ನುತ್ತಾರೆ ಎಂದಿರುವ ಶ್ರೀಗಳು, ಸಿ.ಟಿ.ರವಿ, ಅಶ್ವತ್ಥನಾರಾಯಣ ಸೇರಿದಂತೆ ಹಲವರಿಗೆ ಈ ಬಗ್ಗೆ ಮಾತನಾಡದಂತೆ ಸಲಹೆ ನೀಡಿದ್ದಾರೆ. ಶಾಸನಗಳು, ಗ್ರಂಥಗಳು ಮುಂದಿನ ಪೀಳಿಗೆಗೆ ಕುರುಹುಗಳಾಗಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಬಾರದು ಎಂದೂ ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ.

Share Post