ಆರೋಪ ಸಾಬೀತಾದರೆ ನನ್ನ ನೇಣು ಹಾಕಬಹುದು; ಡಾ.ಕೆ.ಸುಧಾಕರ್‌

ಕೋಲಾರ; ಕೊವಿಡ್‌ ಸಂದರ್ಭದಲ್ಲಿ ಯಾವುದೇ ಹಗರಣ ನಡೆದಿಲ್ಲ. ಒಂದು ವೇಳೆ ಕಾಂಗ್ರೆಸ್‌ ಮಾಡಿರುವ ಆರೋಪ ಸಾಬೀತು ಮಾಡಿದರೆ ಪಬ್ಲಿಕ್‌ನಲ್ಲಿ ನನ್ನನ್ನು ನೇಣು ಹಾಕಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಜೆಡಿಎಸ್‌ ಜೊತೆಗಿನ ಅನೈತಿಕ ಸಂಬಂಧದಿಂದ ಬೇಸತ್ತು ನಾವು ಬಿಜೆಪಿಗೆ ಹೋದೆವು. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಈಗ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವ್ರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಎಂಬುದನ್ನು ನಾನು ನಾಳೆ ಹೇಳ್ತೀನಿ. ಸಿದ್ದರಾಮಯ್ಯ ಆಡಳಿತದ ಐದು ವರ್ಷಗಳಲ್ಲಿ 35 ಸಾವಿರ ಕೋಟಿ ರೂಪಾಯಿ ಹಣ ವ್ಯತ್ಯಾಸ ಆಗಿದೆ ಎಂದು ಆರೋಪಿಸಿದರು.

ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂರು ಸಾವಿರ ಕೋಟಿ ರೂಪಾಯಿ ಖರ್ಚೇ ಮಾಡಿಲ್ಲ. ಈ ಬಗ್ಗೆ ನಾವು ಶ್ವೇತಪತ್ರ ಹೊರಡಿಸಲು ಸಿದ್ಧ ಎಂದು ಸುಧಾಕರ್‌ ಹೇಳಿದರು.

Share Post

Leave a Reply

Your email address will not be published.