ಕುಮಟಳ್ಳಿಗೆ ಟಿಕೆಟ್‌ ನೀಡದಿದ್ದರೆ ರಾಜಕೀಯ ನಿವೃತ್ತಿ; ಪುನರುಚ್ಚರಿಸಿದ ರಮೇಶ್‌ ಜಾರಕಿಹೊಳಿ

ಚಿಕ್ಕೋಡಿ; ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರವಾಗಿ ರಮೇಶ್‌ ಜಾರಕಿಹೊಳಿ ಮತ್ತೆ ಸಿಡಿದೆದ್ದಿದ್ದಾರೆ. ಮಹೇಶ್‌ ಕುಮಟಳ್ಳಿಗೇ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ನಾನೂ ರಾಜಕೀಯ ನಿವೃತ್ತಿ ಘೋಷಣೆ ಮಾಡ್ತೀನಿ ಅಂತ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಅಥಣಿಯಲ್ಲಿ ಮಾತನಾಡಿರುವ ಅವರು, ಲಕ್ಷ್ಮಣ ಸವದಿ ಬುದ್ಧವಂತರು, ಆದ್ರೆ ಯಾಕೆ ಹೀಗೆ ಮಾಡ್ತಿದ್ದಾರೋ ಅರ್ಥವಾಗ್ತಿಲ್ಲ ಎಂದಿದ್ದಾರೆ.

ಸವದಿ ಅವರು ಎಂಎಲ್‌ಸಿ ಆಗಿದ್ದಾರೆ. ಆದರೂ ವರಿಷ್ಠರ ಬಳಿ ಟಿಕೆಟ್‌ ಕೇಳುತ್ತಿದ್ದಾರೆ. ಆದ್ರೆ, ಇದು ಆಗಬಾರದು. ಮಹೇಶ್‌ ಕುಮಟಳ್ಳಿಯವರ ತ್ಯಾಗದಿಂದ ಈ ಬಿಜೆಪಿ ಸರ್ಕಾರ ರಚನೆಯಾಗಿದೆ. ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿಯವರೇ ಬಿಜೆಪಿ ಅಭ್ಯರ್ಥಿ ಅಂತ ನಾನು ನಂಬಿದ್ದೇನೆ. ಆದ್ರೆ ಅವರಿಗೆ ಟಿಕೆಟ್‌ ನೀಡದೇ ಹೋದರೆ ನಾನೂ ಕೂಡಾ ಗೋಕಾಕ್‌ನಿಂದ ಸ್ಪರ್ಧೆ ಮಾಡೋದಿಲ್ಲ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

Share Post