ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ; ಮೈಸೂರಿನಲ್ಲಿ ಸ್ಥಳ ಮಹಜರು

ಮೈಸೂರು; ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಆರೋಪಿ ಶಾರೀಖ್‌ ವಾಸವಿದ್ದ ಮೈಸೂರಿನ ಕೊಠಡಿಯಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಇದಕ್ಕಾಗಿ ಮಂಗಳೂರಿನಿಂದ ಶಂಕಿತ ಉಗ್ರ ಶಾರೀಖ್‌ ಸ್ನೇಹಿತ ರುವುಲ್ಲಾನನ್ನು ಕರೆತಂದಿದ್ದಾರೆ.

ಮೈಸೂರಿನ ಲೋಕನಾಯಕ ನಗರದ ಹತ್ತನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಶಾರೀಖ್‌ ಬಾಡಿಗೆ ಮನೆ ಪಡೆದು ವಾಸವಿದ್ದ. ಅಲ್ಲೇ ಸ್ಫೋಟಕವನ್ನು ಕೂಡಾ ತಯಾರು ಮಾಡಿದ್ದ. ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತನನ್ನು ಕರೆತಂದು ಪೊಲೀಸರು ಮನೆಯಲ್ಲಿ ಮಹಜರು ನಡೆಸುತ್ತಿದ್ದಾರೆ. ನಿನ್ನೆ ಪೊಲೀಸರು ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾಗ, ಸ್ಫೋಟಕ ತಯಾರಿಸಲು ಬಳಸಿದ್ದ ಹಲವು ಕಚ್ಚಾ ವಸ್ತುಗಳು ಪತ್ತೆಯಾಗಿದ್ದವು.

Share Post

Leave a Reply

Your email address will not be published.