ಕಾಂಗ್ರೆಸ್‌ ನಾಲ್ಕನೇ ಆಶ್ವಾಸನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿ ರೂ.

ಬೆಳಗಾವಿ; ಕಾಂಗ್ರೆಸ್‌ ಪಕ್ಷ ರಾಜ್ಯದ ಜನಕ್ಕೆ ನಾಲ್ಕನೇ ಗ್ಯಾರೆಂಟಿ ಆಶ್ವಾಸನೆ ನೀಡಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಲ್ಕನೇ ಗ್ಯಾರೆಂಟಿ ಕಾರ್ಡ್‌ನ್ನು ಬಿಡುಡಗೆ ಮಾಡಿದ್ದಾರೆ. ಇದರಲ್ಲಿ ಪದವೀಧರ ನಿರುದ್ಯೋಗಗಳಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಮಾಡಿರುವ ನಿರುದ್ಯೋಗಿಗಳಿಗೆ ಮಾಸಿಕ ಒಂದೂವರೆ ಸಾವಿರ ರೂಪಾಯಿ ನೀಡುವ ಅಶ್ವಾಸನೆ ನೀಡಲಾಗಿದೆ.

ಇದಕ್ಕೆ ಯುವ ನಿಧಿ ಕಾರ್ಯಕ್ರಮ ಎಂದು ಹೆಸರಿಡಲಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ಆಶ್ವಾಸನೆ ಈಡೇರಿಸುವುದಾಗಿ ಗ್ಯಾರೆಂಟಿ ನೀಡಲಾಗಿದೆ. ಈಗಾಗಲೇ ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ, ಪ್ರತಿ ಮನೆಗೆ ೨೦೦ ಯೂನಿಟ್‌ವರೆಗೆ ವಿದ್ಯುತ್‌ ಉಚಿತ ಹಾಗೂ ಹತ್ತು ಕೆಜಿ ಅಕ್ಕಿ ಉಚಿತ ನೀಡುವುದಾಗಿ ಆಶ್ವಾಸನೆ ನೀಡಲಾಗಿದೆ. ಇದೀಗ ನಾಲ್ಕನೇ ಉಚತ ಆದೇಶವನ್ನು ನೀಡೋದಾಗಿ ಕಾಂಗ್ರೆಸ್‌ ಘೋಷಣೆ ಮಾಡಿದೆ.

Share Post