ಕಾಂಗ್ರೆಸ್‌ ಶಾಸಕ ಕೊಟ್ಟಿದ್ದ ಕುಕ್ಕರ್‌ ಸ್ಫೋಟ; ಬಾಲಕಿಗೆ ಗಂಭೀರ ಗಾಯ

ರಾಮನಗರ; ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಮನೆ ಮನೆಗೆ ಕುಕ್ಕರ್‌ಗಳನ್ನು ಹಂಚಿದ್ದರು. ಆ ಸಮಯದಲ್ಲಿ ಹಲವು ಮನೆಗಳಲ್ಲಿ ಕುಕ್ಕರ್‌ಗಳು ಸ್ಫೋಟಗೊಂಡಿದ್ದರು. ಇದೀಗ ಮತ್ತೊಂದು ಮನೆಯಲ್ಲಿ ಅನ್ನ ಮಾಡುತ್ತಿದ್ದಾಗ ಕುಕ್ಕರ್‌ ಸ್ಫೋಟವಾಗಿದೆ. ಘಟನೆಯಲ್ಲಿ ಹದಿನೇಳು ವರ್ಷದ ಬಾಲಕಿಯ ಮುಖಕ್ಕೆ ಸುಟ್ಟ ಗಾಯಗಳಾಗಿವೆ.

ರಾಮನಗರ ತಾಲ್ಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾಲಕ್ಷ್ಮೀ ಎಂಬ ಬಾಲಕಿ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಾಲಿ ಕಾಂಗ್ರೆಸ್‌ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಈ ಕುಕ್ಕರ್‌ನ್ನು ನೀಡಿದ್ದರು ಎನ್ನಲಾಗಿದೆ.

ಘಟನೆಯ ನಂತರ ಗ್ರಾಮದ ಮಹಿಳೆಯರೆಲ್ಲಾ ಕುಕ್ಕರ್‌ಗಳನ್ನು ತಂದು ಬೀದಿಗೆ ಎಸೆದಿದ್ದಾರೆ. ಇವುಗಳನ್ನು ನೀವೇ ತೆಗೆದುಕೊಂಡು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post