ಕಾರು-ಬಸ್‌ ಡಿಕ್ಕಿ; ಬೀದರ್‌ ಬಳಿ ಇಬ್ಬರು ದುರ್ಮರಣ

ಬೀದರ್‌; ಕಾರು ಹಾಗೂ ಬಸ್‌ ನಡುವೆ ಅಪಘಾತವಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೀದರ್‌ ಬಳಿಯ ಹೊನ್ನಿಕೆರೆಯಲ್ಲಿ ನಡೆದಿದೆ. ಮೃತರನ್ನು ಹೈದರಾಬಾದ್‌ ಮೂದವರು ಎಂದು ಗುರುತಿಸಲಾಗಿದೆ.

ಕೆಲಸದ ಮೇಲೆ ಬೀದರ್‌ಗೆ ಬಂದಿದ್ದ ಹೈದರಾಬಾದ್‌ನ ಮೂಲದ ಐದು ಮಂದಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೀಧರ್‌ನ ಬ್ರಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಮೂವರನ್ನೂ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share Post

Leave a Reply

Your email address will not be published.