ಕುಮಾರಧಾರಾ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ; ಬಲೂನ್‌ ಕಟ್ಟಿಕೊಂಡು ಜಿಗಿದಿದ್ದೇಕೆ..?

ಮಂಗಳೂರು; ಉದ್ಯಮಿಯೊಬ್ಬರು ಬಲೂನ್‌ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆಎ ದಕ್ಷಿಣ ಕನ್ನಡ ಜಿಲ್ಲೆ ಕುದ್ಮಾರು ಬಳಿಯ ಶಾಂತಿಮೊಗರು ಎಂಬಲ್ಲಿ ನಡೆದಿದೆ.

ಉದ್ಯಮಿ ಚಂದ್ರಶೇಖರ್‌ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಮೂರ್ತೆದಾರರ ಸೇವಾ ಸಹಕಾರ ಸಂಘದ ಹಾಲಿ ನಿರ್ದೇಶಕರು. ಈ ಹಿಂದೆ ಈ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಆದ್ರೆ ಯಾಕೆ ಆತ್ಮಹತ್ಯೆ ಮಾಡಿಕೊಂಡರೋ ಗೊತ್ತಿಲ್ಲ.

ಸೇತುವೆ ಬಳಿ ಕಾರು ನಿಲ್ಲಿಸಿ, ಸೊಂಟಕ್ಕೆ ಬಲೂನ್‌ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಗುರುತಿಸಲು ಅನೂಕೂಲವಾಗಲಿ ಎಂದು ಬಲೂನ್‌ ಕಟ್ಟಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳೀಯರು ಬಲೂನ್‌ ಆಧಾರದ ಮೇಲೆ ಮೃತದೇಹವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಘಟನೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Share Post