ಮನೆಯ ಮುಂದೆಯೇ ಕತ್ತಿಯಿಂಡ ಕಡಿದು ಯುವತಿಯ ಕೊಲೆ..!

ಮಡಿಕೇರಿ; ಮನೆಯಲ್ಲಿದ್ದ ಯುವತಿಯನ್ನು ಹೊರಕ್ಕೆ ಕರೆದು ಕತ್ತಿಯಿಂದ ಕೊಲೆ ಮಾಡಿರುವ ದಾರುಣ ಘಟನೆ ವಿರಾಜಪೇಟೆ ತಾಲ್ಲೂಕಿನ ನಾಂಗಲ ಎಂಬ ಗ್ರಾಮದಲ್ಲಿ ನಡೆದಿದೆ. ಹತ್ಯೆ ನಿಖರ ಕಾರಣ ಗೊತ್ತಿಲ್ಲ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬುಟ್ಟಿಯಂಡ ಮಾದಪ್ಪ ಎಂಬುವವರ ಪುತ್ರಿ ಆರತಿ ಕೊಲೆಯಾದ ದುರ್ದೈವಿ. ಆಕೆ ಮನೆಯಲ್ಲಿದ್ದಾಗ ಆಕೆಯನ್ನು ಹೊರಗೆ ಕರೆದು ಮನೆಯ ಮುಂದೆಯೇ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ತಂದೆ ನೀಡಿದ ದೂರಿನ ಅನ್ವಯ ತನಿಖೆ ಚುರುಕುಗೊಳಿಸಲಾಗಿದೆ.

 

Share Post