ಚಲಿಸುತ್ತಿರುವ ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು

ಚಿಕ್ಕಬಳ್ಳಾಪುರ:  ಇತ್ತೀಚೆಗ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ, ಮೊನ್ನೆಯಷ್ಟೇ ಪಟ್ರೇನಹಳ್ಳಿ ರೈಲ್ವೇ ಗೇಟ್ ನಲ್ಲಿ ವಾಟರ್ ಮ್ಯಾನ್ ನಿಗೂಢವಾಗಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೇ ಇಂದು ಅಪರಿಚಿತ ಮಹಿಳೆಯೊಬ್ಬರು ಗಿಡ್ನಹಳ್ಳಿ ರೈಲ್ವೇ ಗೇಟ್ ಬಳಿ ಚಲಿಸುತ್ತಿರುವ ರೈಲಿಗೆ ಅಡ್ಡಲಾಗಿ ಮಲಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈಕೆ ಬಳಿ ಬಂಗಾರಪೇಟೆಯಿಂದ ಚಿಂತಾಮಣಿಗೆ ಪ್ರಯಾಣಿಸಿರುವ ರೈಲಿನಲ್ಲಿ ಪ್ರಯಾಣಿಸಿರುವ ಟಿಕೆಟ್ ದೊರಕಿದ್ದು ಬೇರೆ ಯಾವ ಸುಳಿವು ಸಿಕ್ಕಿಲ್ಲ. ಇನ್ನೂ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ , ಈ ಬಗ್ಗೆ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post