ಬಾಲಿವುಡ್‌ ಹಿರಿಯ ನಟ ವಿಕ್ರಂ ಗೋಖಲೆ ಇನ್ನಿಲ್ಲ

ಪುಣೆ; ಬಾಲಿವುಡ್‌  ಹಿರಿಯ ನಟ ವಿಕ್ರಂ ಗೋಖಲೆ ಪುಣೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ಧಾರೆ.  ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ ಚಿಕಿತ್ಸೆ ಫಲಿಸಲಿಲ್ಲ.

ಗೋಖಲೆ ಅವರು ಮರಾಠಿ ಕಿರುತೆರೆ ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1971ರಲ್ಲಿ ಅಮಿತಾಬ್ ಬಚ್ಚನ್ ಅವರ ಪರ್ವಾನಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು, 2010ರಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದರು.

 

Share Post

Leave a Reply

Your email address will not be published.