ರಿಸೆಪ್ಷನಿಸ್‌ ಕೊಲೆ ಪ್ರಕರಣ; ಆರೋಪಿಗೆ ಸೇರಿದ ರೆಸಾರ್ಟ್‌ ಧ್ವಂಸ

ಡೆಹ್ರಾಡೂನ್; ಉತ್ತರಾಖಂಡದಲ್ಲಿ ರಿಸೆಪ್ಷನಿಸ್ಟ್ ಒಬ್ಬರ ಕೊಲೆ ಪ್ರಕರಣದ ಆರೋಪಿ ಸೇರಿದ ರೆಸಾರ್ಟ್‌ನ್ನು ಧ್ವಂಸ ಮಾಡಲಾಗಿದೆ.  ಋಷಿಕೇಶದ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ವನತಾರಾ ರೆಸಾರ್ಟ್‌ವನ್ನು ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ರೆಸಾರ್ಟ್ ಧ್ವಂಸಕ್ಕೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಕೆಡವಲಾಗಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ. ಉತ್ತರಾಖಂಡದ ಪೌರಿ ಜಿಲ್ಲೆಯ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನನ್ನು ಬಂಧಿಸಲಾಗಿದೆ. ಆಕೆಯ ಹತ್ಯೆಗೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು.

ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್‌ ಠಾಣೆಯಲ್ಲಿ ಪುಲ್ಕಿತ್‌ ಆರ್ಯ ದೂರು ದಾಖಲಿಸಿದ್ದರು. ಮೃತದೇಹವು ರೆಸಾರ್ಟ್‌ನ ನೀರಿನ ಕೊಳದಲ್ಲಿ ಪತ್ತೆಯಾಗಿದೆ. ರೆಸಾರ್ಟ್ ಬಳಿಯ ನೀರಿನ ಚಾನಲ್‌ನಲ್ಲಿ ಹುಡುಕಾಟ ನಡೆಯುತ್ತಿದೆ. ಆರೋಪಿಯ ತಂದೆ ಆಡಳಿತಾರೂಢ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share Post

Leave a Reply

Your email address will not be published.