ಭೂತ ಬಿಡಿಸ್ತೀನಿ ಅಂತ ಬಂದು ಬಾಲಕನ ಪ್ರಾಣವನ್ನೇ ತೆಗೆದ ಕರ್ನಾಟಕದ ಮಾಂತ್ರಿಕ

ಸಾಂಗ್ಲಿ; ಸಮಾಜ ಎಷ್ಟೇ  ಮುಂದವರೆದರೂ ಜನರಲ್ಲಿನ ಮೂಢನಂಬಿಕೆ ಮಾತ್ರ ಹಾಗೆಯೇ ಇದೆ. ಹಳ್ಳಿ ಪ್ರದೇಶಗಳಲ್ಲಿ ಜನ ಈಗಲೂ ಭೂತ ಪ್ರೇತಗಳನ್ನು ಜನ ನಂಬುತ್ತಾರೆ. ಹಾಗೆ ಭೂತ ಬಿಡಿಸಲು ಬಂದ ಕರ್ನಾಟಕದ ಮಾಂತ್ರಿಕನೊಬ್ಬ ಬಾಲಕನ ಪ್ರಾಣವನ್ನೇ ತೆಗೆದಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ದುಷ್ಕೃತ್ಯ ನಡೆದಿದೆ.

ಭೂತೋಚ್ಛಾಟನೆ ಮಾಡುತ್ತೇನೆ ಎಂದು ಕರ್ನಾಟಕದ ಮಾಂತ್ರಿಕನೊಬ್ಬ ಹೇಳಿದ್ದ. 14 ವರ್ಷದ ಬಾಲಕನೊಬ್ಬ ವಿಚಿತ್ರವಾಗಿ ಆಡುತ್ತಿದ್ದರಿಂದ ಆತನ ಪೋಷಕರು ಭೂತ ಹಿಡಿದಿರಬಹುದು ಎಂದು ನಂಬಿದ್ದರು. ಹೀಗಾಗಿ ಈ ಮಾಂತ್ರಿಕನ ಬಳಿ ಕರೆದೊಯ್ದಿದ್ದರು. ಆದ್ರೆ ಮಾಂತ್ರಿಕ ಬಾಲಕನಿಗೆ ತೀವ್ರವಾಗಿ ಥಳಿಸಿದ್ದರಿಂದ ಆತ ಮೃತಪಟ್ಟಿದ್ದಾನೆ.

 ಕವಠೆ ಮಹಾಂಕಲ್ ನಿವಾಸಿ ಆರ್ಯನ್ ದೀಪಕ್ ಲಾಂಜೆ ಎಂಬ ಬಾಲಕನೇ ಸಾವನ್ನಪ್ಪಿರುವವನು. ಈತನಿಗೆ ಹಲವು ದಿನಗಳಿಂದ ಜ್ವರ ಕಾಡುತ್ತಿತ್ತು. ಚಿಕಿತ್ಸೆ ಕೊಡಿಸಿರೂ ಪ್ರಯೋಜನವಾಗಿರಲಿಲ್ಲ. ಬಾಲಕ ಜ್ವರದಿಂದಾಗಿ ವಿಚಿತ್ರವಾಗಿ ಆಡುತ್ತಿದ್ದ. ಹೀಗಾಗಿ, ಆತನಿಗೆ ಭೂತ ಹಿಡಿದಿರಬಹುದೆಂದು ಪೋಷಕರು ನಂಬಿದ್ದರು. ಹೀಗಾಗಿ ಕರ್ನಾಟಕದ ಶಿರಗೂರಿನಲ್ಲಿರುವ ತಾಂತ್ರಿಕ ಅಪ್ಪಾಸಾಹೇಬ್‌ ಕಾಂಬಳೆ ಬಳಿ ಬಾಲಕನನ್ನು ಕರೆದುಕೊಂಡು ಬಂದಿದ್ದರು.

ಭೂತ ಹೋಗಬೇಕು ಅಂದರೆ ಥಳಿಸಬೇಕು ಎಂದಿದ್ದ ಮಾಂತ್ರಿಕ ಬಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದ. ನಂತರ ಬಾಲಕನನ್ನು ಪೋಷಕರು ಮಹಾರಾಷ್ಟ್ರದ ಮೀರಜ್‌ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Share Post