ಬಿಜೆಪಿ ಶಾಸಕ ತಿಪ್ಪಾರೆಡ್ಡಿಯನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಯತ್ನ

ಚಿತ್ರದುರ್ಗ; ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿಯವರನ್ನು ಹನಿಟ್ರ್ಯಾಪ್‌ ಮಾಡುವ ಯತ್ನ ನಡೆದಿದೆ. ಈ ಸಂಬಂಧ ಶಾಸಕ ತಿಪ್ಪಾರೆಡ್ಡಿಯವರು ಸೈಬರ್‌ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚತ ನಂಬರ್‌ನಿಂದ ಶಾಸಕ ತಿಪ್ಪಾರೆಡ್ಡಿಯವರಿಗೆ ವಿಡಿಯೋ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದಾಗ, ಹಿಂದಿಯಲ್ಲಿ ಮಾತನಾಡುತ್ತಿದ್ದ ಮಹಿಳೆ ಬೆತ್ತಲೆಯಾಗಿ ಅಂಗಾಂಗಗಳನ್ನು ತೋರಿಸಿದ್ದಾಳೆ. ಇದನ್ನು ನೋಡಿದ ಶಾಸಕರು ಕೂಡಲೇ ಕರೆ ಕಟ್‌ ಮಾಡಿದ್ದಾರೆ. ಅನಂತರ ವಾಟ್ಸಾಪ್‌ಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾರೆ.

ಇದ್ರಿಂದಾಗಿ ಶಾಸಕರು ಕೂಡಲೇ ತಮ್ಮ ಪತ್ನಿಗೆ ಈ ವಿಚಾರ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಒರಿಸ್ಸಾ ಅಥವಾ ರಾಜಸ್ಥಾನದಿಂದ ಈ ಕರೆ ಬಂದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

 

Share Post