ದೆಹಲಿ ರೀತಿಯಲ್ಲೇ ಹಿಟ್‌ ಅಂಡ್‌ ರನ್‌; 12 ಕಿಲೋ ಮೀಟರ್‌ ಎಳೆದೊಯ್ದ ಕಾರು

ಗಾಂಧೀನಗರ; ದೆಹಲಿಯಲ್ಲಿ ಯುವತಿಗೆ ಡಿಕ್ಕಿ ಹೊಡೆದಿದ್ದ ಕಾರು, ಆಕೆಯ ದೇಹವನ್ನು ಹಲವಾರು ಕಿಲೋ ಮೀಟರ್‌ ದೂರ ಎಳೆದೊಯ್ದಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌ನಲ್ಲಿ ನಡೆದಿದೆ. ಬೈಕ್‌ ಸವಾರನಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಸವಾರನ ದೇಹ ಕಾರಿಗೆ ಸಿಲುಕಿತ್ತು. ಆದರೂ ಕಾರು ಚಾಲಕ ಕಾರನ್ನು 12 ಕಿಲೋ ಮೀಟರ್‌ವರೆಗೂ ಓಡಿಸಿದ್ದಾನೆ.

ಸೂರತ್‌ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ 24 ವರ್ಷದ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಕೂಡಾ ಚಿತ್ರೀಕರಣವಾಗಿದೆ. ಪೊಲೀಸರು ವಿಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

Share Post

Leave a Reply

Your email address will not be published.