ಹುಬ್ಬಳ್ಳಿಯಲ್ಲಿ ಜಿಮ್‌ ಮಾಲೀಕ ನೇಣಿಗೆ ಶರಣು; ಯಾಕೆ ಗೊತ್ತಾ..?

ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಜಿಮ್‌ ಮಾಲೀಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರೂರು ಪಾರ್ಕ್‌ ಬಳಿ ಹುಬ್ಬಳ್ಳಿ ನಗರದ ಪ್ರತಿಷ್ಠಿತ ಜಿಮ್‌ ಇದೆ. ಅದರ ಹೆಸರು ಆರೆಂಜ್‌ ಜಿಮ್‌. ಇದರ ಮಾಲೀಕ ಜಿತೇಂದ್ರ ಶೀಗಿಹಳ್ಳಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.

ಜೀತೇಂದ್ರ ಅವರು ಎಲ್ಲರೂ ಮಲಗಿದ್ದಾಗ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲ್ಮನೆಯ ಕೊಠಡಿಗೆ ತೆರಳಿದ್ದ ಅವರು ಎಷ್ಟು ಹೊತ್ತಾದರೂ ಬಂದಿರಲಿಲ್ಲ. ಬಾಗಿಲು ಬಡಿದರೂ ತೆಗೆದಿಲ್ಲ. ಇದರಿಂದ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಕೂಡಲೇ ಬಾಗಿಲು ಮುರಿದು ಜಿತೇಂದ್ರ ಅವರನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದರು. ಘಟನೆಗೆ ಕಾರಣ ಮಾತ್ರ ಗೊತ್ತಾಗಿಲ್ಲ.

Share Post