ನೇಪಾಳದಲ್ಲಿ ಎರಡು ಕಡೆ ಭೀಕರ ಅಪಘಾತ; ಒಟ್ಟು 13 ಮಂದಿ ದುರ್ಮರಣ

ಕಠ್ಮಂಡು; ನೇಪಾಳದ ಬಾಗಮತಿ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಬ್ಬ ಸಾವನ್ನಪ್ಪಿದ್ದಾನೆ. 18 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಠ್ಮಂಡುವಿನಿಂದ ಬಿರ್‌ಗುಂಜ್‌ನತ್ತ ಸಾಗುತ್ತಿದ್ದ ಮಿನಿಬಸ್‌ ಮಕವಾನ್‌ಪುರ ಜಿಲ್ಲೆಯ ಬಾಗಮತಿ ಪ್ರದೇಶದ ಜುರಿಖೇತ್‌ನ ಕಡಿದಾದ ತಿರುವಿನಲ್ಲಿ ಅಪಘಾತವಾಗಿ ಉರುಳಿ ಬಿದ್ದಿದೆ. ನೇಪಾಳದ ಪಶ್ಚಿಮ ಭಾಗದ ಭುಮೆ ಪುರಸಭೆಗೆ ಸೇರಿದ ಯಾಂಗ್‌ಸಿ ಬಾಗರ್‌ ಎಂಬ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. 13 ಮಂದಿ ಗಾಯಗೊಂಡಿದ್ದಾರೆ. ಕಠ್ಮಂಡುವಿನಿಂದ ರುಕುಮ್‌ಕೋಟ್‌ಗೆ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಒಟ್ಟು 13 ಮಂದಿ ಗಾಯಗೊಂಡಿದ್ದು, ಈ ಪೈಕಿ ಮೂವರ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ರುಕುಮ್‌ಕೋಟ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share Post

Leave a Reply

Your email address will not be published.