12 ಸಾವಿರ ಕೋಟಿ ರೂ. ಮೌಲ್ಯದ ಡ್ರಗ್ಸ್‌ ಪತ್ತೆ; ಎಲ್ಲಿ ಗೊತ್ತಾ..?

ತಿರುವನಂತನಪುರಂ; ಹಡಗಿನಲ್ಲಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಪಡಿಸಿಕೊಂಡಿದದೆ. ಕೇರಳದ ಕರಾವಳಿಯಲ್ಲಿ ಪಾಕ್‌ ಮೂಲದ ವ್ಯಕ್ತಿಯೊಬ್ಬ ಹಡಗಿನಲ್ಲಿ ಅಪಾರ ಪ್ರಮಾಣದ ಡ್ರಗ್ಸ್‌ ಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಹಡಗಿನಲ್ಲಿ ಸುಮಾರು 2,500 ಕೆಜಿ ತೂಕದ ಮೆಥಾಂಫೆಟಮೈನ್‌ ಎಂಬ ಮಾದಕ ವಸ್ತು ಪತ್ತೆಯಾಗಿದೆ. ಇದು ಅತ್ಯಂತ ದುಬಾರಿ ಮಾದಕ ವಸ್ತು ಎಂದು ತಿಳಿದುಬಂದಿದೆ. ಇದರ ಬೆಲೆ 12 ಸಾವಿರ ಕೋಟಿ ರೂಪಾಯಿ ರಂದು ಹೇಳಲಾಗುತ್ತಿದೆ. `ಅಪರೇಷನ್ ಸಮುದ್ರಗುಪ್ತ್’ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post